ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್(ಎಕೆಪಿಎ)ಕಾಸರಗೋಡು ಪೂರ್ವ ಘಟಕದ ಆಶ್ರಯದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಈ ಸಂದರ್ಭ ಘಟಕದ ಸದಸ್ಯರಿಗೆ, ಸ್ಥಳೀಯರಿಗೆ ವಿವಿಧ ಪ್ರಬೇದಗಳ ಸಸಿಗಳನ್ನು ವಿತರಿಸಲಾಯಿತು.
ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಸಂಘಟನೆ ವಲಯ ಕೋಶಾಧಿಕಾರಿ ವಾಮನ್ ಕುಮಾರ್ ಉದ್ಘಾಟಿಸಿದರು. ಘಟಕದ ಅಧ್ಯಕ್ಷ ಅಜಿತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಘಟಕ ಸದಸ್ಯೆ ಪ್ರಿಯಾ ಅವರಿಗೆ ಸಸಿ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾ ನ್ಯಾಚುರಲ್ ಕ್ಲಬ್ ಕೋರ್ಡಿನೇಟರ್ ದಿನೇಶ್, ಜಿಲ್ಲಾ ಸಮಿತಿ ಸದಸ್ಯ ಸುರೇಶ್‌ಚಂದ್ರ, ಮನೀಶ್, ಮಣಿ, ಸಂಜೀವ ರಐ, ರಾಜಶೇಖರ, ದೀಪು, ಶಿಬಿನ್, ಮಣಿಕಂಠನ್ ಮೊದಲಾದವರು ಉಪಸ್ಥಿತರಿದ್ದರು. ಸಂಘಟನೆ ವತಿಯಿಂದ ವಿವಿಧ ಪ್ರಬೇದಗಳ ಸಸ್ಯಗಳನ್ನು ವಇತರಿಸಲಾಯಿತು.