ಕಾಸರಗೋಡು: ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಜಿಲ್ಲಾ ಸಂಘ ಬೀರಂತಬೈಲು ಕಾಸರಗೋಡು ಇದರ 91 ನೇ ಮಹಾಸಭೆ ಬೀರಂತಬೈಲಿನ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಸ್ಮಾರಕ ಸಭಾ ಭವನದಲ್ಲಿ ಜರಗಿತು. ಸಂಘದ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ ಅಧ್ಯಕ್ಷತೆ ವಹಿಸಿ ಮಾತನಾಡಿ ಉಪಸಂಘಗಳ ಕಾರ್ಯಚಟುವಟಿಕೆಗಳ ಆಧಾರದ ಮೇಲೆ ಜಿಲ್ಲಾ ಸಂಘದ ಪ್ರಗತಿ ಅವಲಂಬಿಸಿದೆ. ಉಪಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರುಗಳು ಇನ್ನು ಹೆಚ್ಚಿನ ರೀತಿಯಲ್ಲಿ ಕಾರ್ಯಪ್ರವೃತ್ತ್ತರಾಗಿ ಜಿಲ್ಲಾ ಸಂಘದೊಂದಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು.
2023 ನೇ ವರ್ಷದ ವರದಿಯನ್ನು ಕಾರ್ಯದರ್ಶಿ ಸತೀಶ್ ಕುಮಾರ್ ದೋಣಿಬಾಗಿಲು ಮಂಡಿಸಿದರು. 2023 ನೇ ವರ್ಷದ ಲೆಕ್ಕಪತ್ರ ಮತ್ತು 2024-2025 ರ ಮುಂಗಡಪತ್ರವನ್ನು ಕೋಶಾಧಿಕಾರಿ ಸತೀಶ್ ಮಾಸ್ತರ್ ಕೂಡ್ಲು ಮಂಡಿಸಿದರು. ಜಿಲ್ಲಾ ಮಹಿಳಾಸಂಘ, ಜಿಲ್ಲಾ ಯುವಸಂಘ, ಉಪಸಂಘಗಳು ತಮ್ಮ ತಮ್ಮ ಕ್ಷೇತ್ರದ ವರದಿ ಮತ್ತು ಲೆಕ್ಕಪತ್ರವನ್ನು ಮಂಡಿಸಿ ಸದ್ರಿ ಪ್ರತಿಯನ್ನು ಜಿಲ್ಲಾ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಐ.ಸಿ.ಎ.ಆರ್ - ಸಿ.ಪಿ.ಸಿ.ಆರ್.ಐ. ಕಾಸರಗೋಡಿನಲ್ಲಿ ನಡೆದ 108 ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ 2024 ನೇ ಸಾಲಿನ ಅತ್ಯುತ್ತಮ ತಾಂತ್ರಿಕ ಪ್ರಶಸ್ತಿ ಪುರಸ್ಕøತರಾದ ಪಾಂಡುರಂಗ ಅವರಿಗೆ ಜಿಲ್ಲಾ ಸಂಘದ ವತಿಯಿಂದ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಗೌರವ ಕಾರ್ಯದರ್ಶಿ ಬಿ.ಪಿ.ವೆಂಕಟ್ರಮಣ, ಜಿಲ್ಲಾ ಮಹಿಳಾ ಗೌರವಾಧ್ಯಕ್ಷೆ ಆಶಾ ರಾಧಾಕೃಷ್ಣ, ಉಪಸಂಘಗಳ ಪದಾಧಿಕಾರಿಗಳು ಶುಭ ಹಾರೈಸಿದರು. ಸತೀಶ್ ಕುಮಾರ್ ದೋಣಿಬಾಗಿಲು ಸ್ವಾಗತಿಸಿ, ಉಷಾಕಿರಣ್ ಅಣಂಗೂರು ವಂದಿಸಿದರು. ಚಂಚಲಾಕ್ಷಿ ಬೀರಂತಬೈಲು ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.