ಗಾಜಾ: ಪ್ಯಾಲೆಸ್ಟೀನ್‌ಗೆ ಸ್ಲೊವೇನಿಯಾ ಮಾನ್ಯತೆ ನೀಡಿದ್ದು, ಅಲ್ಲಿನ ಸಂಸತ್ತಿನಲ್ಲಿ ಮಂಗಳವಾರ ಈ ನಿರ್ಧಾರವನ್ನು ಅಂಗೀಕರಿಸಲಾಗಿದೆ.
ಗಾಜಾ: ಪ್ಯಾಲೆಸ್ಟೀನ್‌ಗೆ ಸ್ಲೊವೇನಿಯಾ ಮಾನ್ಯತೆ ನೀಡಿದ್ದು, ಅಲ್ಲಿನ ಸಂಸತ್ತಿನಲ್ಲಿ ಮಂಗಳವಾರ ಈ ನಿರ್ಧಾರವನ್ನು ಅಂಗೀಕರಿಸಲಾಗಿದೆ.
ಪ್ಯಾಲೆಸ್ಟೀನ್‌ಗೆ ಮಾನ್ಯತೆ ನೀಡುವುದಾಗಿ ನಾರ್ವೆ, ಸ್ಪೇನ್ ಮತ್ತು ಐರ್ಲೆಂಡ್ ಇತ್ತೀಚೆಗೆ ಹೇಳಿದ್ದವು.
ಸ್ಪೇನ್, ಐರ್ಲೆಂಡ್ ಹಾಗೂ ನಾರ್ವೆ ಮಾನ್ಯತೆಯನ್ನು ಘೋಷಿಸಿದ ಬೆನ್ನಲ್ಲೇ ಸ್ಲೊವೇನಿಯಾ ಈ ನಿರ್ಧಾರ ಕೈಗೊಂಡಿದೆ. ಈ ದೇಶಗಳ ನಿರ್ಧಾರವನ್ನು ಇಸ್ರೇಲ್ ಖಂಡಿಸಿತ್ತು.
ದಕ್ಷಿಣ ಗಾಜಾದ ರಫಾ ನಗರದ ಮೇಲೆ ಇಸ್ರೇಲ್ ದಾಳಿಗೆ ಪ್ರತಿಕ್ರಿಯೆಯಾಗಿ ಪ್ಯಾಲೆಸ್ಟೀನ್ ರಾಷ್ಟ್ರಕ್ಕೆ ಮಾನ್ಯತೆ ನೀಡುವ ಪ್ರಯತ್ನವನ್ನು ಚುರುಕುಗೊಳಿಸಿರುವುದಾಗಿ ಸ್ಲೊವೇನಿಯಾ ಪ್ರಧಾನಿ ತಿಳಿಸಿದ್ದಾರೆ.
ಪ್ಯಾಲಿಸ್ಟೀನ್‌ಗೆ ಮಾನ್ಯತೆ ನೀಡುವ ಪ್ರಸ್ತಾವವನ್ನು ಅನುಮೋದನೆಗಾಗಿ ಸಂಸತ್‌ಗೆ ಕಳುಹಿಸಲಾಗಿತ್ತು. 90 ಸಂಖ್ಯಾಬಲವಿರುವ ಸಂಸತ್ತಿನಲ್ಲಿ ಪ್ರಸ್ತಾವದ ಪರವಾಗಿ 52 ಮತಗಳು ದೊರೆತಿವೆ.