ಕುಂಬಳೆ : ಅಂಗಡಿಮೊಗರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ೧೯೯೫ರ ಕನ್ನಡ ಬ್ಯಾಚ್ ಹಳೆಯ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ ಮೂಲಕ ಸಂಗ್ರಹಿಸಲಾದ ಛತ್ರಿಗಳನ್ನು ಪ್ರಿ ಪ್ರೈಮರಿ, ಒಂದು ಮತ್ತು ಎರಡನೇ ತರಗತಿಯ ಕನ್ನಡ ಮಾಧ್ಯಮ ಮಕ್ಕಳಿಗೆ ವಿತರಿಸುವ ಕಾರ್ಯಕ್ರಮ ಶಾಲೆಯಲ್ಲಿ ಜರುಗಿತು.
ವಾಟ್ಸಪ್ ತಂಡದ ರವೀಶ ಮತ್ತು ವೇಣುಗೋಪಾಲ್ ಅವರು ಶಾಲಾ ಮುಖ್ಯ ಶಿಕ್ಷಕಿ ವತ್ಸಲ ಕುಮಾರಿ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಜಾಕ್ ತೋಣಿ, ಮಾಧವನ್ ಮಾಸ್ಟರ್, ಅಧ್ಯಾಪಕ ವೃಂದದವರು, ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು.