ಕಾಸರಗೋಡು: ನಾಗರಿಕ ಪೂರೈಕೆ ಇಲಾಖೆ ಕಾಸರಗೋಡು ಜಿಲ್ಲಾ ಅಧಿಕಾರಿಯಾಗಿ ಕೆ.ಎನ್.ಬಿಂದು ಅವರನ್ನು ನೇಮಿಸಲಾಗಿದೆ. ಇವರು ಜಿಲ್ಲೆಯ ಮೊದಲ ಮಹಿಳಾ ಜಿಲ್ಲಾ ನಾಗರಿಕ ಪೂರೈಕೆ ಅಧಿಕಾರಿಯಾಗಿದ್ದು, ಇವರು ಈ ಹಿಂದೆ ಕಾಞಂಗಾಡು ತಾಲೂಕಿನ ನಾಗರಿಕ ಪೂರೈಕೆ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ತಳಿಪರಂಬ, ಕಾಞಂಗಾಡು, ತಾಲೂಕು ಸರಬರಾಜು ಕಛೇರಿಗಳು ಮತ್ತು ಸಪ್ಲೈಕೋದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಕಾಞಂಗಾಡು ಸಪ್ಲೈಕೋ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರಿಗೆ ನಾಗರಿಕ ಪೂರೈಕೆ ಇಲಾಖೆ ಜಿಲ್ಲಾ ಅಧಿಕಾರಿಯನ್ನಾಗಿ ಬಡ್ತಿ ನೀಡಲಾಗಿದೆ. ಇವರು ಕಾಞಂಗಾಡು ನಿವಾಸಿಯಾಗಿದ್ದಾರೆ.