ನವದೆಹಲಿ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ(ಎನ್‌ಡಿಆರ್‌ಎಫ್) ಸಿಬ್ಬಂದಿಗೆ ಶೇ 40 'ತೊಂದರೆ ಮತ್ತು ಅಪಾಯ ಭತ್ಯೆ' ನೀಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಘೋಷಿಸಿದ್ದಾರೆ.
ನವದೆಹಲಿ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ(ಎನ್‌ಡಿಆರ್‌ಎಫ್) ಸಿಬ್ಬಂದಿಗೆ ಶೇ 40 'ತೊಂದರೆ ಮತ್ತು ಅಪಾಯ ಭತ್ಯೆ' ನೀಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಘೋಷಿಸಿದ್ದಾರೆ.
ಈಚೆಗೆ ಹಿಮಾಚಲ ಪ್ರದೇಶದ ಮಣಿರಂಗ್ ಶಿಖರವನ್ನು ಯಶಸ್ವಿಯಾಗಿ ಏರಿ ಹಿಂತಿರುಗಿದ್ದ ಎನ್‌ಡಿಆರ್‌ಎಫ್‌ನ 35 ಜನರ ಸಾಹಸ ತಂಡಕ್ಕೆ ಅಭಿನಂದನೆ ಸಲ್ಲಿಸುವ ವೇಳೆ ಅಮಿತ್ ಶಾ ಅವರು ಈ ಘೋಷಣೆ ಮಾಡಿದ್ದಾರೆ.
ಇದೇ ವೇಳೆ ಎನ್‌ಡಿಆರ್‌ಎಫ್, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ(ಸಿಎಪಿಎಫ್) ಸೇರಿದಂತೆ ಕೇಂದ್ರ ಸರ್ಕಾರದ ಅಡಿ ಬರುವ ಭದ್ರತಾ ಪಡೆಗಳಲ್ಲಿ 'ಕ್ರೀಡಾ ಸಂಸ್ಕೃತಿ' ವೃದ್ಧಿಸಲು ಕ್ರಮ ಕೈಗೊಳ್ಳುವುದಾಗಿಯೂ ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.