HEALTH TIPS

ಅಗಲ್ಪಾಡಿ ಯಾದವ ಸೇವಾಸಂಘದ ವಿದ್ಯಾರ್ಥಿವೇತನ ವಿತರಣೆ

             ಬದಿಯಡ್ಕ: ಅಗಲ್ಪಾಡಿ ಯಾದವ ಸೇವಾ ಸಂಘದ ವತಿಯಿಂದ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ಭಾನುವಾರ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಪಾಂಚಜನ್ಯ ಸಾಂಸ್ಕøತಿಕ ಭವನದಲ್ಲಿ ಜರಗಿತು. ಯಾದವ ಸೇವಾ ಸಂಘದ ಅಧ್ಯಕ್ಷ ಸುಧಾಮ ಪದ್ಮಾರು ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಗಿರೀಶ್ ಪಿಕೆ. ವಿದ್ಯಾರ್ಥಿವೇತನ ವಿತರಿಸಿದರು. ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ, ಯಾದವ ಸೇವಾ ಸಂಘದ ಗೌರವಾಧ್ಯಕ್ಷ ಜನಾಧರ್Àನ ಮಣಿಯಾಣಿ ಬೆದ್ರುಕೂಡ್ಲು, ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಗೌರವಾಧ್ಯಕ್ಷ ಬಾಬು ಮಣಿಯಾಣಿ ಜಯನಗರ, ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ವಸಂತಿ ಟೀಚರ್ ಅಗಲ್ಪಾಡಿ, ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಕಾರ್ಯದರ್ಶಿ ರಮೇಶ್ ಕೃಷ್ಣ ಪದ್ಮಾರು, ಯುವ ವಿಭಾಗದ ಅಧ್ಯಕ್ಷ ದೀಪಕ್ ಬೆದ್ರುಕೂಡ್ಲು, ಉಪಸ್ಥಿತರಿದ್ದರು.

           ಯಾದವ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್ ಕಲ್ಲಕಟ್ಟ ಸ್ವಾಗತಿಸಿ, ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಕಾರ್ಯದರ್ಶಿ ರಾಜೇಶ್ ಮಾಸ್ತರ್ ಅಗಲ್ಪಾಡಿ ಕಾರ್ಯಕ್ರಮ ನಿರೂಪಿಸಿ ಕಾರ್ಯದರ್ಶಿ ಚಂದ್ರಶೇಖರ ಮಾಸ್ತರ್ ನಾರಂಪಾಡಿ ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries