HEALTH TIPS

ತಮಿಳುನಾಡು ಕೇರಳ ಕೆಎಸ್‍ಆರ್‍ಟಿಸಿಗಳನ್ನು ಹಿಡಿದರೆ, ಕೇರಳವೂ ಅದೇ ಹಾದಿ ಅನುಸರಿಸಲಿದೆ: ಶಬರಿಮಲೆ ಸೀಸನ್ ನೆನಪಲಿರಲಿ: ಸಾರಿಗೆ ಸಚಿವ ಗಣೇಶ್ ಕುಮಾರ್

              ತಿರುವನಂತಪುರಂ: ಕೇರಳದ ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ತಮಿಳುನಾಡು ವಶಕ್ಕೆ ಪಡೆದುಕೊಂಡರೆ, ತಮಿಳುನಾಡಿನ ಬಸ್ ಗಳನ್ನೂ ಕೇರಳ ವಶಪಡಿಸಿಕೊಳ್ಳಲಿದೆ ಎಂದು ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ಸದನದಲ್ಲಿ ಹೇಳಿದ್ದಾರೆ.

               ಶಬರಿಮಲೆ ಸೀಸನ್ ಬರುತ್ತಿದ್ದು, ತಮಿಳುನಾಡಿನಿಂದ ಕೇರಳಕ್ಕೆ ಹೆಚ್ಚು ಜನ ಬರುತ್ತಿದ್ದಾರೆ ಎಂಬುದನ್ನು ತಮಿಳುನಾಡು ಅರ್ಥ ಮಾಡಿಕೊಳ್ಳಬೇಕು ಎಂದು ಗಣೇಶ್ ಕುಮಾರ್ ವಿಧಾನಸಭೆಗೆ ತಿಳಿಸಿದರು. ತಮಿಳುನಾಡು ಕೇರಳ ಸರ್ಕಾರದ ಸಲಹೆ ಪಡೆಯದೆ 4,000 ರೂಪಾಯಿ ತೆರಿಗೆಯನ್ನು ಹೆಚ್ಚಿಸಿದೆ. ತಮಿಳುನಾಡಿನಲ್ಲಿ ತೆರಿಗೆ ಹೆಚ್ಚಿಸಿದರೆ ಕೇರಳದಲ್ಲೂ ಅದೇ ರೀತಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

                    “ಕೇರಳದ ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ಸೀಜ್ ಮಾಡಿದರೆ ತಮಿಳುನಾಡಿನ ಬಸ್‍ಗಳೂ ಸೀಜ್ ಆಗುತ್ತವೆ. ಶಬರಿಮಲೆ ಸೀಸನ್ ಬರುತ್ತಿದೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.ಅಲ್ಲಿಂದ ಹೆಚ್ಚಿನವರು ಕೇರಳಕ್ಕೆ ಬರುತ್ತಾರೆ.ಕೇರಳ ಬಸ್ ಗಳಿಂದ ಹೆಚ್ಚುವರಿ  4000 ತೆರಿಗೆ ಸಂಗ್ರಹಿಸಿದರೆ ನಾವೂ ಇಲ್ಲಿ ವಸೂಲು ಮಾಡಿಯೇ ಮಾಡುತ್ತೇವೆ. ಹೀಗಾಗಿ ಖಜಾನೆಗೆ ಹಣ ತುಂಬಿಸಲು ಕೇರಳ ಸರ್ಕಾರವನ್ನು ಕೇಳದೆಯೇ ತಮಿಳುನಾಡು ತೆರಿಗೆಯನ್ನು ಹೆಚ್ಚಿಸಲು ನಿರ್ಧರಿಸಿದೆ ಎಂದವರು ಟೀಕಿಸಿದರು.

                  ಬಸ್ ಚಾಲಕರು ಮದ್ಯ ಸೇವಿಸಿ ವಾಹನ ಚಲಾಯಿಸುವಂತಿಲ್ಲ, ಕೆಎಸ್ ಆರ್ ಟಿಸಿ ನೌಕರರಿಗೆ ಗಂಜಿ ಕುಡಿಯಲು ಅವಕಾಶ ನೀಡಲಾಗುವುದು ಎಂದು ಗಣೇಶ್ ಕುಮಾರ್ ವಿಧಾನಸಭೆಯಲ್ಲಿ ತಿಳಿಸಿದರು. ಇದರ ಅಂಗವಾಗಿ ಕೆಎಸ್ ಆರ್ ಟಿಸಿ ನೌಕರರಿಗೆ ಒಂದೇ ಕಂತಿನಲ್ಲಿ ವೇತನ ನೀಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

                    ತಪಾಸಣೆಗಳನ್ನು ಕಟ್ಟುನಿಟ್ಟಾಗಿ ನಡೆಸಿದಾಗ ಅಪಘಾತದ ಪ್ರಮಾಣವು ಬಹಳ ಕಡಮೆಯಾಗಿದೆ. ಅಂಕಿ-ಅಂಶಗಳನ್ನು ಮಂಡಿಸಲು ಸಿದ್ಧ ಎಂದು ಸಚಿವರು ಮಾಹಿತಿ ನೀಡಿದರು. 1200 ಬಸ್ ಗಳು ಕಟ್ಟಪ್ಪುರಂ ದುರಸ್ಥಿ ಕೇಂದ್ರದಲ್ಲ್ಲಿದ್ದವು. ಈಗಿದು 600ಕ್ಕೆ ಇಳಿಕೆಯಾಗಿದೆ. ಕೋವಿಡ್ ಅವಧಿಯ ಬದಲಾವಣೆಗಳು ಪ್ರಯಾಣಿಕರನ್ನು ಕೆಎಸ್‍ಆರ್‍ಟಿಸಿಯಿಂದ ದೂರವಿಟ್ಟವು.

                ಅಂಕಿ-ಅಂಶಗಳನ್ನು ನೀಡಿದಾಗಲೆಲ್ಲ ವೇತನ ನೀಡಬೇಕು ಎಂಬ ಸ್ಪಷ್ಟ ನಿಲುವು  ಮೂಡಿದ್ದು, ಆಧುನೀಕರಣ ಯೋಜನೆಗಳು ಹಾಗೂ ವೇತನದಲ್ಲಿ ಸುಧಾರಣೆಗಳನ್ನು ಆರು ತಿಂಗಳೊಳಗೆ ಜಾರಿಗೊಳಿಸಲಾಗುವುದು ಎಂದರು. ಕಳೆದ ತಿಂಗಳವರೆಗಿನ ಪಿಂಚಣಿಯನ್ನು ಸರಿಯಾಗಿ ಪಾವತಿಸಲು ಸಾಧ್ಯವಾಯಿತು. ಇತರ ಪ್ರಯೋಜನಗಳನ್ನು ಒದಗಿಸಲಾಗಲಿಲ್ಲ. ಆದರೆ ಮುಖ್ಯಮಂತ್ರಿಗಳು 625 ಕೋಟಿ ಸಾಲ ಪಡೆಯಲು ಅನುಮತಿ ನೀಡಿದ್ದಾರೆ ಎಂದು ಕೆ.ಬಿ.ಗಣೇಶ್ ಕುಮಾರ್ ಹೇಳಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries