ಕುಂಬಳೆ: ಸೂರಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆ ನಡೆಸಲಾಯಿತು. ಪ್ರತ್ಯೇಕವಾದ ಅಸೆಂಬ್ಲಿಯಲ್ಲಿ ವಿದ್ಯಾರ್ಥಿಗಳು ಮಾದಕ ದ್ರವ್ಯ ವಿರೋಧಿ ಪ್ರತಿಜ್ಞೆ ಕೈಗೊಂಡರು. ವಿದ್ಯಾರ್ಥಿಗಳ ಪೋಸ್ಟರ್, ಕೃತಿಗಳ ಸಂಗ್ರಹವಾದ ವಿಶೇಷಾಂಕ ‘ಸ್ಮೈಲ್' ನ್ನು ಮುಖ್ಯೋಪಾಧ್ಯಾಯಿನಿ ಸುನೀತ ಎ ಬಿಡುಗಡೆಗೊಳಿಸಿದರು.
ಅಮಲು ಪದಾರ್ಥದ ಕುರಿತಾದ ಹಾಡು ಎಲ್ಲರ ಗಮನಸೆಳೆಯಿತು. ಕುಂಬಳೆ ವಲಯ ಅಬಕಾರಿ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೈಗಾ ಮತ್ತು ಅಮೃತ ಕೆ ಪ್ರತಿಜ್ಞೆ ಬೋಧಿಸಿದರು. ಧನುಪ್ರಿಯ ಸ್ಪೀಕರ್ ಆಗಿರುವ ಶಾಲಾ ಪಾರ್ಲಿಮೆಂಟಿನಲ್ಲಿ ಮಾದಕ ದ್ರವ್ಯ ವಿರುದ್ಧ ತಂಡ ರೂಪಿಸಲಾಯಿತು. ಶಿಕ್ಷಕರಾದ ರಾಧಾಕೃಷ್ಣ ಎಂ, ಅಶ್ವತಿ ಎಂ ಎಸ್, ಅಬ್ದುಲ್ ಕರೀಂ ಡಿಕೆ, ಶಾಲಾ ನಾಯಕ ಜೀವನ್ ಕುಮಾರ್ ಉಪಸ್ಥಿತರಿದ್ದರು.