HEALTH TIPS

ಸಂತ ಮೋನಿಕಾ ಶಾಲೆಯಲ್ಲಿ ಯೋಗ ದಿನಾಚರಣೆ

          ಕುಂಬಳೆ: ಕುಂಬಳೆ ಸಂತ ಮೋನಿಕಾ ಸಿಬಿಎಸ್‍ಇ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಯೋಗ ಪ್ರದರ್ಶನಕ್ಕಾಗಿ ಯೋಗಪಟು ಅಭಿಜ್ಞಾ  ಹರೀಶ್ ಕರಂದಕ್ಕಾಡು ಆಗಮಿಸಿದ್ದರು. ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಯೋಗ ಪ್ರದರ್ಶನ ನಡೆಯಿತು. 

          ಸಮಾರಂಭದಲ್ಲಿ ಶಾಲಾ ಪ್ರಬಂಧಕ ವಂ.ಮೆಲ್ವಿನ್ ಡಿ'ಸೋಜಾ, ಪ್ರಾಂಶುಪಾಲೆ ಸಿಸ್ಟರ್ ಅನ್ಸಿ  ಮ್ಯಾಥ್ಯೂ, ಉಪ ಪ್ರಾಂಶುಪಾಲ ಸೂರಜ್ ಜೋಸೆಫ್ ಲೋಬೋ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಅತಿಥಿಯಾಗಿ ಆಗಮಿಸಿದ  ಅಭಿಜ್ಞ ಹರೀಶ್  ಅವರನ್ನು ವೇದಿಕೆಯಲ್ಲಿ ಸಮ್ಮಾನಿಸಲಾಯಿತು. ಕಾರ್ಯಕ್ರಮವನ್ನು ಅನುಷಾ ನಿರ್ವಹಿಸಿದರು. ತುಷಾರ ಸ್ವಾಗತಿಸಿ, ನಫೀಸಾ ನುಹಾ ವಂದಿಸಿದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries