HEALTH TIPS

ಹಿಜಾಬ್‌ ಬ್ಯಾನ್‌ ಮಾಡಿದ ಮುಸ್ಲಿಂ ದೇಶ - ಬಕ್ರೀದ್‌ ಆಚರಣೆಗೂ ನಿಷೇಧ!

 ಜಕಿಸ್ತಾನ್ : ಹಿಜಾಬ್‌ ನಿಷೇಧ (hijab ban) ಮಸೂದೆಯನ್ನು ತಜಕಿಸ್ತಾನ್‌ದ (tazakistan) ಮೇಲ್ಮನೆ ಅಂಗೀಕಾರ ಮಾಡಿದೆ. ಆ ಮೂಲಕ ದೇಶಾದ್ಯಂತ ಹಿಜಾಬ್‌ಧಾರಣೆ ನಿಷೇಧಿಸಿದೆ

ರಜಾದಿನಗಳು, ಸಂಪ್ರದಾಯಗಳು ಮತ್ತು ಆಚರಣೆಗಳು, ಮಕ್ಕಳನ್ನು ಬೆಳೆಸುವಲ್ಲಿ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ ಪಾತ್ರ, ಪೋಷಕರ ಜವಾಬ್ದಾರಿಗಳ ಕುರಿತು ದೇಶದ ಕಾನೂನುಗಳಿಗೆ ಮಾಡಿದ ತಿದ್ದುಪಡಿಗಳನ್ನು ಅಧಿವೇಶನವು ಅನುಮೋದಿಸಿದೆ ಎಂದು ಮಜ್ಲಿಸಿ ಮಿಲ್ಲಿಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ

ಮಜ್ಲಿಸಿ ನಮೋಯಂಡಗಾನ್ (ತಜಕಿಸ್ತಾನದ ಸಂಸತ್ತಿನ ಕೆಳಮನೆ) ಜೂನ್ 8 ರಂದು ಹಿಜಾಬ್ ಮತ್ತು ಈದ್ಗಾರ್ಡಕ್ ಅನ್ನು ನಿಷೇಧಿಸುವ ಮಸೂದೆಯನ್ನು ಅನುಮೋದಿಸಿತ್ತು. ಇದೀಗ ಮೇಲ್ಮನೆಯಾದ ಮಜ್ಲಿಸಿ ಮಿಲ್ಲಿಯ ಕೂಡಾ ಮಸೂದೆ ಅಂಗಿಕಾರ ಮಾಡಿದ್ದು ಇದು ಈ ನೆಲದ ಕಾನೂನಾಗಲಿದೆ.
ರುಸ್ತಮ್ ಎಮೋಮಾಲಿ ಅವರ ಅಧ್ಯಕ್ಷತೆಯಲ್ಲಿ ಜೂನ್ 19 ರಂದು ನಡೆದ ತಜಕಿಸ್ತಾನದ ಮೇಲ್ಮನೆಯಾದ ಮಜ್ಲಿಸಿ ಮಿಲಿಯಾದಲ್ಲಿ ಈ ಮಸೂದೆ ಅಂಗಿಕಾರಗೊಂಡಿದೆ

ಹಲವಾರು ವರ್ಷಗಳ ಅನಧಿಕೃತ ನಿಷೇಧದ ನಂತರ ತಜಕಿಸ್ತಾನ್ ಇಸ್ಲಾಮಿಕ್ ಹಿಜಾಬ್ ಅನ್ನು ನಿಷೇಧಿಸಿದೆ ಎಂದು ಗಮನಾರ್ಹ. 2007 ರಲ್ಲಿ ಶಿಕ್ಷಣ ಸಚಿವಾಲಯವು ವಿದ್ಯಾರ್ಥಿಗಳಿಗೆ ಧಾರ್ಮಿಕ ಉಡುಪುಗಳು ಮತ್ತು ಪಾಶ್ಚಿಮಾತ್ಯ ಶೈಲಿಯ ಮಿನಿಸ್ಕರ್ಟ್‌ಗಳನ್ನು ನಿಷೇಧಿಸಿದಾಗಿನಿಂದಲೇ ಹಿಜಾಬ್‌ ಧಾರಣೆಗೂ ಬ್ರೇಕ್‌ ಬಿದ್ದಿತ್ತು

ಮದ್ಯಪ್ರಾಚ್ಯ ದೇಶದಿಂದ ತಜಕಿಸ್ತಾನಕ್ಕೂ ವಿಸ್ತರಣೆಗೊಂಡ ಹಿಜಾಬ್‌ಧಾರಣೆ ಅಭ್ಯಾಸ ತಜಕಿಸ್ತಾನದ ಸಂಪ್ರದಾಯದ ವಿರುದ್ಧವಾಗಿದೆ ಎಂದಿದೆ. ಈ ದೇಶ ಇದೀಗ ಕಾನೂನನ್ನೇ ತಂದಿದ್ದು ಯಾರೂ ಹಿಜಾಬ್‌ ಧರಿಸುವಂತಿಲ್ಲ ಎಂದಿದೆ. ಅದರೊಂದಿಗೆ ಮಕ್ಕಳು ಈದ್‌-ಅಲ್‌-ಫಿತರ್‌ ಹಾಗೂ ಈದ್‌-ಅಲ್‌-ಅಧಾ ಸಮಯದಲ್ಲಿ ಮಕ್ಕಳು ರಸ್ತೆಗಳಲ್ಲಿ ಹಬ್ಬದ ಶುಭಾಶಯ ವಿನಿಮಯ ಮಾಡುವುದು ಹಾಗೂ ಮನೆಮನೆಗೆ ತೆರಳಿ ಹಬ್ಬಕ್ಕೆ ವಿಶ್‌ ಮಾಡುವುದರ ಮೇಲೆಯೂ ನಿರ್ಬಂಧ ಹೇರಿದೆ

ಇದಷ್ಟೇ ಅಲ್ಲ. ತಜಕಿಸ್ತಾನದಲ್ಲಿ ಗಂಡಸರು ಕುರುಚಲು ಗಡ್ಡ ಬೆಳೆಸಿಕೊಳ್ಳುವುದನ್ನೂ ನಿಷೇಧಿಸಿದೆ. ಕಳೆದ ದಶಕದಲ್ಲಿ ಸಾವಿರಾರು ಪುರುಷರನ್ನು ಪೊಲೀಸರು ತಡೆದಿದು ಈ ವಿಚಾರವಾಗಿ ದಂಡ ಹಾಕಿದ್ದಾರೆ ಹಾಗೂ ಅನೇಕ ಜನ ತಮ್ಮ ಇಚ್ಛೆಗೆ ವಿರುದ್ಧವಾಗಿ ಅವರ ಗಡ್ಡವನ್ನು ಬೋಳಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries