ಮುಂಬೈ: ಸೋಮವಾರ ಷೇರು ಪೇಟೆಯಲ್ಲಿ ಎಟಿಎಂ ಮಂತ್ರ ಮೊಳಗಿತು ('ಆಯೇಗಾ ತೊ ಮೋದಿ'- ಮೋದಿಯೇ ಬರುತ್ತಾರೆ). ಇದರಿಂದಾಗಿ, ಸೂಚ್ಯಂಕಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟುವ ಮೂಲಕ ಹಲವು ದಾಖಲೆಗಳು ಸೃಷ್ಟಿಯಾದವು.
ಚುನಾವಣೆಯ ಜ್ವರವು ರಾಷ್ಟ್ರವನ್ನು ಆವರಿಸುತ್ತಿದ್ದಂತೆಯೇ, ಹೂಡಿಕೆದಾರರು ಮತ್ತೊಮ್ಮೆ ಪರಿಚಿತ ಮಂತ್ರದತ್ತ ತಿರುಗಿದರು.
30-ಷೇರುಗಳ ಬಿಎಸ್ಇ ಸೂಚ್ಯಂಕ 2,507.47 ಅಂಕಗಳು ಅಥವಾ 3.39 ಪ್ರತಿಶತದಷ್ಟು ಏರಿಕೆಯಾಗಿ 76,468.78ರ ಹೊಸ ಗರಿಷ್ಠ ಮಟ್ಟವನ್ನು ಮುಟ್ಟಿತು. ಇದು ಕಳೆದ ಮೂರು ವರ್ಷಗಳಲ್ಲಿ ಒಂದೇ ದಿನದಲ್ಲಿ ಸೂಚ್ಯಂಕದ ಗರಿಷ್ಠ ಏರಿಕೆಯಾಗಿದೆ. ದಿನದ ವಹಿವಾಟಿನಲ್ಲಿ ಈ ಸೂಚ್ಯಂಕವು 2,777.58 ಅಂಕಗಳು ಅಥವಾ 3.75 ಪ್ರತಿಶತದಷ್ಟು ಜಿಗಿದು 76,738.89ರ ದಾಖಲೆಯ ಇಂಟ್ರಾ-ಡೇ ಗರಿಷ್ಠ ಮಟ್ಟವನ್ನು ತಲುಪಿತ್ತು. 2021ರ ಜನವರಿ 2ರಂದು ಎರಡೂ ಸೂಚ್ಯಂಕಗಳು ತಲಾ 5 ಪ್ರತಿಶತದಷ್ಟು ಏರಿಕೆಯಾಗಿದ್ದು, ಇದು ಸೆನ್ಸೆಕ್ಸ್ ಮತ್ತು ನಿಫ್ಟಿ 50 ಈ ಎರಡೂ ಸೂಚ್ಯಂಕಗಳ ಅತಿದೊಡ್ಡ ಏಕದಿನ ಲಾಭವಾಗಿದೆ.
ಎನ್ಎಸ್ಇ ನಿಫ್ಟಿ ಸೂಚ್ಯಂಕವು 733.20 ಅಂಕಗಳು ಅಥವಾ ಶೇಕಡ 3.25ರಷ್ಟು ಏರಿಕೆಯಾಗಿ 23,263.90ಕ್ಕೆ ತಲುಪಿತು. ದಿನದ ವಹಿವಾಟಿನಲ್ಲಿ, ಇದು 808 ಅಂಕಗಳು ಅಥವಾ ಶೇಕಡ 3.58ರಷ್ಟು ಏರಿಕೆಯಾಗಿ 23,338.70ರ ಹೊಸ ಇಂಟ್ರಾ-ಡೇ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿತ್ತು. ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ಲೂ-ಚಿಪ್ ಸ್ಟಾಕ್ಗಳಲ್ಲಿನ ತೀಕ್ಷ್ಣವಾದ ರ‍್ಯಾಲಿ ಸೂಚ್ಯಂಕಗಳನ್ನು ಜೀವಮಾನದ ಗರಿಷ್ಠ ಮಟ್ಟಕ್ಕೆ ತಳ್ಳಿತು. ವಲಯವಾರು ಸೂಚ್ಯಂಕಗಳ ಪೈಕಿ, ಪಿಎಸ್ಯುು, ಪವರ್, ಯುಟಿಲಿಟೀಸ್, ಆಯಿಲ್, ಎನರ್ಜಿ, ಕ್ಯಾಪಿಟಲ್ ಗೂಡ್ಸ್ ಮತ್ತು ರಿಯಾಲ್ಟಿ ಸೂಚ್ಯಂಕಗಳು ಶೇಕಡ 8ರಷ್ಟು ಏರಿಕೆಯಾಗಿರುವುದು ಕೂಡ ದಾಖಲೆಯಾಗಿದೆ.
ಶನಿವಾರ ಪ್ರಕಟಗೊಂಡ ಮತಗಟ್ಟೆಯ 12ಕ್ಕಿಂತ ಹೆಚ್ಚು ಸಮೀಕ್ಷೆಗಳು ಎನ್ಡಿಎ ಒಕ್ಕೂಟ ಸರಾಸರಿ 365 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಮರಳಲಿದ್ದರೆ, ಇಂಡಿ ಒಕ್ಕೂಟ 146 ಸ್ಥಾನಗಳಿಗೆ ಸೀಮಿತಗೊಳ್ಲಲಿದೆ ಎಂದು ಭವಿಷ್ಯ ನುಡಿದಿವೆ. ಎನ್ಟಿಪಿಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪವರ್ ಗ್ರಿಡ್ ಷೇರುಗಳ ಬೆಲೆ ತಲಾ 9 ಪ್ರತಿಶತದಷ್ಟು ಜಿಗಿದವು. ಲಾರ್ಸೆಸ್ ಅಂಡ್ ಟೂಬ್ರೊ, ಆಕ್ಸಿಸ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಅಲ್ಟ್ರಾಟೆಕ್ ಸಿಮೆಂಟ್, ಮಹೀಂದ್ರಾ ಮತ್ತು ಮಹೀಂದ್ರಾ, ಇಂಡಸ್ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಟಾಟಾ ಸ್ಟೀಲ್ ಷೇರುಗಳು ಕೂಡ ದೊಡ್ಡ ಲಾಭ ಗಳಿಸಿದವು. ಸನ್ ಫಾರ್ವ, ಎಚ್ಸಿಎಲ್ ಟೆಕ್ನಾಲಜೀಸ್, ಏಷ್ಯನ್ ಪೇಂಟ್ಸ್, ನೆಸ್ಲೆ ಮತ್ತು ಇನ್ಪೋಸಿಸ್ ಷೇರುಗಳು ಹಿನ್ನಡೆ ಕಂಡವು.
ಏಷ್ಯಾದ ಮಾರುಕಟ್ಟೆಗಳ ಪೈಕಿ, ಸಿಯೋಲ್, ಟೋಕಿಯೊ ಮತ್ತು ಹಾಂಗ್ಕಾಂಗ್ ಲಾಭ ಮಾಡಿದವು. ಶಾಂಘೖ ನಷ್ಟ ಕಂಡಿತು. ಐರೋಪ್ಯ ಮಾರುಕಟ್ಟೆಗಳು ಸಕಾರಾತ್ಮಕವಾಗಿ ವಹಿವಾಟು ನಡೆಸಿದವು. ಶುಕ್ರವಾರದಂದು ಅಮೆರಿಕ ಮಾರುಕಟ್ಟೆಗಳು ಲಾಭದಲ್ಲಿ ಕೊನೆಗೊಂಡವು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಶುಕ್ರವಾರ 1,613.24 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.
ಶುಕ್ರವಾರ ಬಿಎಸ್ಇ ಬೆಂಚ್ವಾರ್ಕ್ ಸೂಚ್ಯಂಕ 75.71 ಅಂಕಗಳು ಅಥವಾ ಶೇಕಡ 0.10ರಷ್ಟು ಏರಿಕೆ ಕಂಡು 73,961.31ಕ್ಕೆ ಸ್ಥಿರವಾಗಿದ್ದರೆ, ನಿಫ್ಟಿ ಸೂಚ್ಯಂಕವು 42.05 ಅಂಕಗಳು ಅಥವಾ ಶೇಕಡ 0.19ರಷ್ಟು ಏರಿಕೆ ಕಂಡಿತ್ತು.
ಓಲಾ ಉದ್ಯೋಗಿಗಳ ಸಂಖ್ಯೆ ಕಡಿತ?
ನವದೆಹಲಿ: ಓಲಾ ಎಲೆಕ್ಟ್ರಿಕ್ ತನ್ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ- ಇನಿಷಿಯಲ್ ಪಬ್ಲಿಕ್ ಆಫರ್), ಅಂದರೆ ಷೇರು ಮಾರುಕಟ್ಟೆಯನ್ನು ಪ್ರವೇಶಿಸುವ ಮುಂಚಿತವಾಗಿ ನಿರ್ವಹಣಾ ವೆಚ್ಚವನ್ನು ನಿಯಂತ್ರಿಸಲು ಮುಂಬರುವ ವಾರಗಳಲ್ಲಿ 400-500 ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸುತ್ತಿದೆ. ಕಂಪನಿಯ ನಾಯಕತ್ವವು ಪ್ರಸ್ತುತ ಸಂಸ್ಥೆಯಾದ್ಯಂತ ನಿರೀಕ್ಷಿತ ವಜಾಗಳ ಪ್ರಮಾಣವನ್ನು ನಿರ್ಧರಿಸುತ್ತಿದೆ.
ಮಿಡ್-ಸ್ಮಾಲ್ ಸೂಚ್ಯಂಕ ಗಳಲ್ಲಿಯೂ ದಾಖಲೆ
ಸೋಮವಾರದ ಖರೀದಿಯು ಕೇವಲ ದೊಡ್ಡ ಕ್ಯಾಪ್ ಸ್ಟಾಕ್ಗಳಿಗೆ ಸೀಮಿತವಾಗಿರಲಿಲ್ಲ. ಮಿಡ್ ಕ್ಯಾಪ್ ಮತ್ತು ಸ್ಮಾಲ್-ಕ್ಯಾಪ್ ಸೂಚ್ಯಂಕಗಳು ಕೂಡ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದವು. ಬಿಎಸ್ಇ ಮಿಡ್ಕ್ಯಾಪ್ ಸೂಚ್ಯಂಕವು ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 44560.97 ಅನ್ನು ಮುಟ್ಟಿದ ನಂತರ, ಶೇ.3.54ರಷ್ಟು ಏರಿಕೆಯಾಗಿ 44,367.67ಕ್ಕೆ ತಲುಪಿತು. ಬಿಎಸ್ಇ ಸ್ಮಾಲ್ಕ್ಯಾಪ್ ಸೂಚ್ಯಂಕವು ತನ್ನ ಹೊಸ ದಾಖಲೆಯ ಗರಿಷ್ಠ ಮಟ್ಟವಾದ 48,973.96 ಅನ್ನು ತಲುಪಿ, ಅಂತಿಮವಾಗಿ ಶೇ. 2.05ರಷ್ಟು ಏರಿಕೆಯೊಂದಿಗೆ 48,232.30ಕ್ಕೆ ಸ್ಥಿರವಾಯಿತು.
ಅದಾನಿ ಸಮೂಹದ ಷೇರುಗಳ ಬೆಲೆ ಗಗನಮುಖಿ
ಮುಂಬೈ: ಅದಾನಿ ಸಮೂಹದ ಷೇರುಗಳ ಬೆಲೆಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಹಲವಾರು ಅದಾನಿ ಗ್ರೂಪ್ ಸ್ಟಾಕ್ಗಳು ಅಪ್ಪರ್ ಸರ್ಕ್ಯೂಟ್ ಹಿಟ್ ಕೂಡ ಆಗಿವೆ. ಈ ಸಮೂಹದ ಕೆಲವು ಸ್ಟಾಕ್ಗಳು 16%ವರೆಗೂ ಏರಿಕೆ ಕಂಡಿವೆ. ಅದಾನಿ ಎಂಟರ್ಪ್ರೖೆಸಸ್ 9.72% ರಷ್ಟು ಏರಿಕೆ ಕಂಡು 3,743 ರೂ. ತಲುಪಿದೆ. ಅದಾನಿ ಪೋರ್ಟ್ಸ್
ಮತ್ತು ಸ್ಪೇಷಲ್ ಎಕನಾಮಿಕ್ ಜೋನ್ (ಅಕಖಉಘ) 11% ರಷ್ಟು ಏರಿಕೆಯಾಗಿ 1,595.30 ರೂ.ಗೆ ತಲುಪಿದೆ. ಅದಾನಿ ಪವರ್ 15.82% ಏರಿಕೆ ಕಂಡು 875.35 ರೂ. ಮುಟ್ಟಿದೆ. ಅದಾನಿ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್, ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಮತ್ತು ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ ಷೇರುಗಳು ಸಹ ಗಮನಾರ್ಹ ಲಾಭ ದಾಖಲಿಸಿದ್ದು, ಕ್ರಮವಾಗಿ 9.38%, 9.65% ಮತ್ತು 15.28% ರಷ್ಟು ಏರಿಕೆ ಕಂಡಿವೆ. ಅದಾನಿ ವಿಲ್ಮಾರ್ ಲಿಮಿಟೆಡ್ ಷೇರುಗಳ ಬೆಲೆ 6.94% ರಷ್ಟು ಏರಿಕೆ ದಾಖಲಿಸಿ 380.55 ರೂ.ಗೆ ತಲುಪಿದೆ. ಮುಕೇಶ್ ಅಂಬಾನಿಯವರ ರಿಲಯನ್ಸ್ ಗ್ರೂಪ್ ಮತ್ತು ಟಾಟಾ ಗ್ರೂಪ್ನ ಹೆಜ್ಜೆಗಳನ್ನು ಅನುಸರಿಸಿ ಅದಾನಿ ಗ್ರೂಪ್ ನಿರ್ವಹಣಾ ಲಾಭದಲ್ಲಿ 10 ಶತಕೋಟಿ ಡಾಲರ್ ಗಡಿಯನ್ನು ದಾಟಿದ 3ನೇ ಭಾರತೀಯ ವ್ಯಾಪಾರ ಸಮೂಹವಾಗಿ ಹೊರಹೊಮ್ಮಿದೆ.
ಬಂಪರ್ ಲಾಭ
ಬಿಎಸ್ಇಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀ ಕರಣವು ಸೋಮವಾರ ಒಂದೇ ದಿನದಲ್ಲಿ 14 ಲಕ್ಷ ಕೋಟಿ ರೂ.ಗೆ ಏರಿಕೆಯಾಯಿತು. ಹಿಂದಿನ ವಹಿವಾಟು ದಿನದಲ್ಲಿನ 412 ಲಕ್ಷ ಕೋಟಿ ರೂ.ಗಳಿಂದ 426 ಲಕ್ಷ ಕೋಟಿ ರೂ.ಗಳಿಗೆ ಬಂಡವಾಳವು ಏರಿತು. ಈ ಮೂಲಕ ಹೂಡಿಕೆದಾರರು ಒಂದೇ ದಿನದಲ್ಲಿ 14 ಲಕ್ಷ ಕೋಟಿ ರೂ.ಗಳಷ್ಟು ಶ್ರೀಮಂತ ರಾದರು.
ಮೋದಿ ಆಡಳಿತದ ಮೋಡಿ 13 ಷೇರುಗಳಲ್ಲಿ ಭರ್ಜರಿ ಪ್ರಾಫಿಟ್
ಮುಂಬೈ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಎರಡನೇ ಅವಧಿಯು ಷೇರು ಹೂಡಿಕೆದಾರರಿಗೆ ಸಾಕಷ್ಟು ಲಾಭ ಮಾಡಿಕೊಟ್ಟಿತು. ಏಕೆಂದರೆ ಬೆಂಚ್ವಾರ್ಕ್ ಬಿಎಸ್ಇ ಸೂಚ್ಯಂಕ ಕಳೆದ ಐದು ವರ್ಷಗಳಲ್ಲಿ ಮೇ ತಿಂಗಳವರೆಗೆ 86% ಏರಿಕೆಯಾಗಿದೆ. ಬಿಎಸ್ಇ ಮಿಡ್ಕ್ಯಾಪ್ ಮತ್ತು ಬಿಎಸ್ಇ ಸ್ಮಾಲ್-ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ 185% ಮತ್ತು 216% ಏರಿಕೆ ಕಂಡವು. ಇದೇ ಅವಧಿಯಲ್ಲಿ ಕನಿಷ್ಠ 13 ಸ್ಟಾಕ್ಗಳು 10,000% ಕ್ಕಿಂತ ಹೆಚ್ಚು ಏರಿಕೆ ಕಂಡವು. 84,604% ರಷ್ಟು ಲಾಭದೊಂದಿಗೆ, ಡೈಮಂಡ್ ಪವರ್ ಇನ್ಪಾ›ಸ್ಟ್ರಕ್ಚರ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಕಂಪನಿಯ ಷೇರುಗಳ ಬೆಲೆ 2019 ಮೇ 30ರಂದು 1.03 ರೂ.ರಿಂದ 2024 ಮೇ 31ರಂದು 872.45 ರೂ.ಗೆ ಜಿಗಿದಿದೆ. ಈ ಅವಧಿಯಲ್ಲಿ ಷೇರುಗಳಲ್ಲಿನ 1 ಲಕ್ಷ ರೂ. ಹೂಡಿಕೆಯು 8.47 ಕೋಟಿ ರೂ.ಗೆ ಏರಿಕೆಯಾಗಿದೆ. ವಾರೀ ರಿನ್ಯೂವಬಲ್ ಟೆಕ್ನಾಲಜೀಸ್ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿದೆ. ಕಳೆದ ಐದು ವರ್ಷಗಳಲ್ಲಿ ಈ ಷೇರು 69,464% ಏರಿಕೆಯಾಗಿ 2,393 ರೂ. ತಲುಪಿದೆ.
ಹಜೂರ್ ಮಲ್ಟಿ ಪ್ರಾಜೆಕ್ಟ್ ಆರ್ಕಿಡ್ ಫಾರ್ವ, ಪ್ರವೇಗ್, ಪತಂಜಲಿ ಫುಡ್ಸ್, ಡಾಲ್ಪಿನ್ ಆಫ್ಶೋರ್ ಎಂಟರ್ಪ್ರೖೆಸಸ್ (ಭಾರತ), ಡಬ್ಲುಯಎಸ್ ಇಂಡಸ್ಟ್ರೀಸ್ (ಇಂಡಿಯಾ), ಎಸ್ಜಿ ಫಿನ್ಸವ್, ರೆಮಿಡಿಯಮ್ ಲೈಫ್ಕೇರ್, ರಜನೀಶ್ ರೀಟೇಲ್, ಲಾಯ್ಡ್ಸ್ ಇಂಜಿನಿಯರಿಂಗ್ ವರ್ಕ್ಸ್ ಮತ್ತು ಜೆ ತಪರಿಯಾ ಪ್ರಾಜೆಕ್ಟ್ಸ್ ಷೇರುಗಳು ಕೂಡ 10,000% ರಿಂದ 29,000% ನಡುವೆ ಏರಿಕೆ ಕಂಡಿವೆ.
ಇತ್ತೀಚಿನ ಮತಗಟ್ಟೆ ಸಮೀಕ್ಷೆಗಳು ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೂ ದೊಡ್ಡ ಜನಾದೇಶದೊಂದಿಗೆ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಮರಳುವ ನಿರೀಕ್ಷೆಯಿದೆ ಎಂದು ಹೇಳಿವೆ. ಆಕ್ಸಿಸ್ ಮೈ ಇಂಡಿಯಾ-ಇಂಡಿಯಾ ಟುಡೇ ಎಕ್ಸಿಟ್ ಪೋಲ್ 2024ರ ಪ್ರಕಾರ, ಎನ್ಡಿಎ 361-401 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ, ಇಂಡಿಯಾ ಬ್ಲಾಕ್ 131-166 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ, ಇತರರು 8-20 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಮಾರ್ಕೆಟ್ಸ್ಮೊಜೊದ ಸಂಸ್ಥಾಪಕ ಮತ್ತು ಸಿಇಒ ಮೋಹಿತ್ ಬಾತ್ರಾ ಅವರು ಮೋದಿ ಸರ್ಕಾರದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, 'ಕಳೆದ ದಶಕದಲ್ಲಿ ಸರ್ಕಾರವು ಗಮನಾರ್ಹ ಸುಧಾರಣೆಗಳನ್ನು ಕೈಗೊಂಡಿದೆ, ಭಾರತವನ್ನು ದುರ್ಬಲ ಸ್ಥಿತಿಯಿಂದ ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗೆ ಪರಿವರ್ತಿಸಿದೆ' ಎಂದು ಹೇಳಿದ್ದಾರೆ.
ಇಂಡಿಗೋ ಜತೆ ಜಪಾನ್ ಏರ್ಲೈನ್ಸ್ ಒಪ್ಪಂದ
ಮುಂಬೈ: ಜಪಾನ್ ಏರ್ಲೈನ್ಸ್ ಸೋಮವಾರ ಇಂಡಿಗೋ ಜತೆ ಕೋಡ್ಶೇರ್ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಜಪಾನಿನ ವಿಮಾನಯಾನ ಸಂಸ್ಥೆಯು ದೇಶೀಯ ವಾಹಕದ ನೆಟ್ವರ್ಕ್ನ 14 ಸ್ಥಳಗಳಿಗೆ ಸೇವೆಗಳನ್ನು ವಿಸ್ತರಿಸಲು ನೆರವಾಗಲಿದೆ. ಪ್ರಸ್ತುತ, ಜಪಾನ್ ಏರ್ಲೈನ್ಸ್ ಟೋಕಿಯೊದಿಂದ ದೆಹಲಿ ಮತ್ತು ಬೆಂಗಳೂರಿಗೆ ತನ್ನ ಸೇವೆಗಳನ್ನು ನಿರ್ವಹಿಸುತ್ತದೆ. ಇದು ಹನೇಡಾ ವಿಮಾನ ನಿಲ್ದಾಣದಿಂದ ರಾಷ್ಟ್ರೀಯ ರಾಜಧಾನಿಗೆ ದೈನಂದಿನ ವಿಮಾನ ಸೇವೆಗಳನ್ನು ಒದಗಿಸುತ್ತದೆ. ಬೆಂಗಳೂರಿಗೆ ವಾರಕ್ಕೆ ಮೂರು ಬಾರಿ ನರಿತಾ ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುತ್ತದೆ.
ಜಪಾನ್ ಏರ್ಲೈನ್ಸ್ (ಜೆಎಎಲ್) ಮತ್ತು ಇಂಡಿಗೋ ಕೋಡ್ಶೇರ್ ಪಾಲುದಾರಿಕೆಗೆ ಒಪ್ಪಿಕೊಂಡಿವೆ. ಇದು ಜಪಾನ್ ಮತ್ತು ಭಾರತದ ನಡುವೆ ಹೆಚ್ಚಿನ ಪ್ರಯಾಣದ ಆಯ್ಕೆಗಳನ್ನು ಒದಗಿಸುವ ಮೂಲಕ ಗ್ರಾಹಕರಿಗೆ ಪ್ರಯೋಜನ ನೀಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಪಾಲುದಾರಿಕೆ ಮೂಲಕ, ಮುಂಬೈ, ಚೆನ್ನೈ, ಹೈದರಾಬಾದ್, ಕೋಲ್ಕತಾ, ಅಹಮದಾಬಾದ್, ಅಮೃತಸರ, ಕೊಚ್ಚಿ, ಕೊಯಮತ್ತೂರು, ತಿರುವನಂತಪುರಂ, ತಿರುಚಿರಾಪಳ್ಳಿ, ಪುಣೆ, ಲಖನೌ, ವಾರಾಣಸಿಯಂತಹ ಪ್ರಮುಖ ನಗರಗಳನ್ನು ಒಳಗೊಂಡ ವ್ಯಾಪಕವಾದ ಪ್ಯಾನ್-ಇಂಡಿಯಾ ನೆಟ್ವರ್ಕ್ ಸ್ಥಾಪಿಸಲು ಸಾಧ್ಯವಾಗುತ್ತದೆ ಎಂದು ಜಪಾನ್ ಏರ್ಲೈನ್ಸ್ ಹೇಳಿದೆ.
ನೇಮಕಾತಿ ವಿಳಂಬ
ಟೆಕ್ ಕಂಪನಿ ಇನ್ಪೋಸಿಸ್ನಿಂದ 2,000ಕ್ಕೂ ಹೆಚ್ಚು ಕ್ಯಾಂಪಸ್ ನೇಮಕಾತಿಯಲ್ಲಿ ಪದೇಪದೆ ವಿಳಂಬವಾಗುತ್ತಿರುವ ಬಗ್ಗೆ ತನಿಖೆ ನಡೆಸುವಂತೆ ಐಟಿ ವಲಯದ ಉದ್ಯೋಗಿಗಳ ಒಕ್ಕೂಟವು (ಘಐಖಉಖ) ಕಾರ್ವಿುಕ ಮತ್ತು ಉದ್ಯೋಗ ಸಚಿವಾಲಯವನ್ನು ಒತ್ತಾಯಿಸಿದೆ.
ಈ ವಿಳಂಬವು ಎರಡು ವರ್ಷಗಳಿಗೂ ಹೆಚ್ಚು ಕಾಲ ಮುಂದುವರಿದಿದ್ದು, ವೃತ್ತಿಪರರಿಗೆ ಗಮನಾರ್ಹ ತೊಂದರೆಗಳನ್ನು ಉಂಟು ಮಾಡಿದೆ ಎಂದು ನ್ಯಾಸೆಂಟ್ ಇನ್ಪಮೇಷನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೆಟ್ (ಘಐಖಉಖ) ಆರೋಪಿಸಿದೆ. ಈ ಬಗ್ಗೆ ಇನ್ಪೋಸಿಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ಪೋಸಿಸ್ನ ಈ ಕ್ರಮಗಳು ಯುವ ವೃತ್ತಿಪರರೊಂದಿಗೆ ನಂಬಿಕೆಯ ಗಂಭೀರ ಉಲ್ಲಂಘನೆ ಆಗಿದೆ ಎಂದು ಒಕ್ಕೂಟದ ಅಧ್ಯಕ್ಷ ಹರ್ಪ್ರೀತ್ ಸಿಂಗ್ ಸಲೂಜಾ ಅವರು ಆರೋಪಿಸಿದ್ದಾರೆ. ಇನ್ಪೋಸಿಸ್ನ ಆಫರ್ ಪತ್ರಗಳನ್ನು ಅವಲಂಬಿಸಿ ಅನೇಕರು ಉತ್ತಮ ನಂಬಿಕೆಯಿಂದ ಇತರ ಉದ್ಯೋಗ ಆಫರ್ಗಳನ್ನು ತಿರಸ್ಕರಿಸಿದ್ದಾರೆ. ಈಗ, ಆದಾಯದ ಕೊರತೆ ಮತ್ತು ಸ್ಪಷ್ಟವಾದ ಆನ್ಬೋರ್ಡಿಂಗ್ ಟೈಮ್ೈನ್ನಿಂದಾಗಿ ಅವರು ಆರ್ಥಿಕ ಸಂಕಷ್ಟ ಮತ್ತು ಅನಿಶ್ಚಿತತೆ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಒಕ್ಕೂಟವು ಕಾರ್ವಿುಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಇನ್ಪೋಸಿಸ್ ಹೊಸ ನೇಮಕಾತಿಗಳಿಗೆ ತನ್ನ ಜವಾಬ್ದಾರಿಗಳನ್ನು ಪೂರೈಸುತ್ತದೆಯೇ ಎಂದು ಖಚಿತಪಡಿಸಿಕೊಳ್ಳಲು ಈ ವಿಷಯದ ಬಗ್ಗೆ ತನಿಖೆ ನಡೆಸಬೇಕೆಂದು ಪತ್ರದಲ್ಲಿ ಕೋರಲಾಗಿದೆ.