ಟೋಕಿಯೊ : ಕೋವಿಡ್ ಸಂಬಂಧಿಸಿದ ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಜಪಾನ್‍ನಲ್ಲಿ ಎರಡು ದಿನಗಳೊಳಗೆ ಜನರನ್ನು ಕೊಲ್ಲಬಹುದಾದ ಅಪರೂಪದ ಮಾಂಸ ತಿನ್ನುವ ಬ್ಯಾಕ್ಟೀರಿಯಾ ವೇಗವಾಗಿ ಹರಡುತ್ತಿರುವುದಾಗಿ ವರದಿಯಾಗಿದೆ.
ಈ ವರ್ಷದ ಜೂನ್ 2ರವರೆಗೆ ದೇಶದಲ್ಲಿ `ಸ್ಟ್ರೆಪ್ಟೊಕೊಕಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್(ಎಸ್‍ಟಿಎಸ್‍ಎಸ್)ನ ಪ್ರಕರಣ 977ಕ್ಕೆ ಹೆಚ್ಚಿದ್ದರೆ, ಕಳೆದ ಇಡೀ ವರ್ಷ 941 ಪ್ರಕರಣ ದಾಖಲಾಗಿತ್ತು ಎಂದು ಸಾಂಕ್ರಾಮಿಕ ರೋಗಗಳ ರಾಷ್ಟ್ರೀಯ ಸಂಸ್ಥೆ ಮಾಹಿತಿ ನೀಡಿದೆ.
50 ವರ್ಷ ಮೀರಿದವರು ಈ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ವರದಿ ಹೇಳಿದೆ. ಈ ಸೋಂಕಿನ ಪ್ರಕರಣ ಹೆಚ್ಚುತ್ತಿರುವ ಬಗ್ಗೆ 2022ರ ಅಂತ್ಯದಲ್ಲಿ ಕನಿಷ್ಟ 5 ಯುರೋಪಿಯನ್ ದೇಶಗಳು ವಿಶ್ವ ಆರೋಗ್ಯ ಸಂಘಟನೆ(ಡಬ್ಲ್ಯೂಎಚ್‍ಒ) ಗೆ ಮಾಹಿತಿ ನೀಡಿವೆ. ಕೋವಿಡ್ ನಿರ್ಬಂಧ ಅಂತ್ಯಗೊಳಿಸಿರುವುದು ಈ ಪ್ರಕರಣ ಹೆಚ್ಚಲು ಮುಖ್ಯ ಕಾರಣ ಎಂದು ಡಬ್ಲ್ಯೂಎಚ್‍ಒ ಹೇಳಿದೆ.
ಗಡಿಯ ಬಳಿ ಗೋಡೆ ಕಟ್ಟುತ್ತಿರುವ ಉತ್ತರ ಕೊರಿಯಾ: ವರದಿ
: ಉತ್ತರ ಕೊರಿಯಾವು ಗಡಿಯ ಬಳಿ ಉಭಯ ದೇಶಗಳನ್ನು ಪ್ರತ್ಯೇಕಿಸುವ `ಸೇನಾರಹಿತ ವಲಯ'ದ ಒಳಗೆ ರಸ್ತೆಗಳು ಹಾಗೂ ಗೋಡೆಯನ್ನು ಕಟ್ಟುತ್ತಿದೆ ಎಂದು ದಕ್ಷಿಣ ಕೊರಿಯಾದ ಮಾಧ್ಯಮ ಶನಿವಾರ ವರದಿ ಮಾಡಿವೆ.
ಮಿಲಿಟರಿ ಗಡಿರೇಖೆಯ(ಎಂಡಿಎಲ್) ಉತ್ತರದಲ್ಲಿ ಈ ನಿರ್ಮಾಣ ಚಟುವಟಿಕೆ ನಡೆಯುತ್ತಿದೆ. ಇಲ್ಲಿ ನೆಲವನ್ನು ಅಗೆದು ಗೋಡೆ ಕಟ್ಟಲಾಗುತ್ತಿದೆ ಮತ್ತು ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಉತ್ತರ ಕೊರಿಯಾದ ಮಿಲಿಟರಿಯ ಚಟುವಟಿಕೆಗಳನ್ನು ನಿಕಟವಾಗಿ ಗಮನಿಸಲಾಗುತ್ತಿದೆ ಎಂದು ದಕ್ಷಿಣ ಕೊರಿಯಾದ ರಕ್ಷಣಾ ಇಲಾಖೆಯನ್ನು ಉಲ್ಲೇಖಿಸಿದ ವರದಿ ಹೇಳಿದೆ.