ವಾಷಿಂಗ್ಟನ್: ಭಾರತ ಮೂಲದ ವೈದ್ಯ ಡಾ.ಪ್ರಶಾಂತ್ ರೆಡ್ಡಿ ಕೆನ್ಸಸ್‌ನಿಂದ ರಿಪಬ್ಲಿಕನ್ ಪಾರ್ಟಿಯ ಅಭ್ಯರ್ಥಿಯಾಗಿ ಅಮೆರಿಕದ ಸಂಸತ್ತಿಗೆ ಸ್ಪರ್ಧಿಸುತ್ತಿದ್ದಾರೆ.
ವಾಷಿಂಗ್ಟನ್: ಭಾರತ ಮೂಲದ ವೈದ್ಯ ಡಾ.ಪ್ರಶಾಂತ್ ರೆಡ್ಡಿ ಕೆನ್ಸಸ್‌ನಿಂದ ರಿಪಬ್ಲಿಕನ್ ಪಾರ್ಟಿಯ ಅಭ್ಯರ್ಥಿಯಾಗಿ ಅಮೆರಿಕದ ಸಂಸತ್ತಿಗೆ ಸ್ಪರ್ಧಿಸುತ್ತಿದ್ದಾರೆ.
ಪ್ರಸ್ತುತ ಈ ಕ್ಷೇತ್ರವನ್ನು ಡೆಮಕ್ರಾಟ್ ಪಕ್ಷದ ಶರೈಸ್ ಡೇವಿಡ್ಸ್ ಪ್ರತಿನಿಧಿಸುತ್ತಿದ್ದು, 2018ರಿಂದ ಸತತ ಮೂರು ಬಾರಿ ಆಯ್ಕೆಯಾಗಿದ್ದಾರೆ.
ಚೆನ್ನೈ ಮೂಲದ ವೈದ್ಯ ಪ್ರಶಾಂತ್ ರೆಡ್ಡಿ ಅವರಿಗೆ ಸ್ಪೀಕರ್ ಮೈಕ್ ಜಾನ್ಸನ್ ಸೇರಿದಂತೆ ರಿಪಬ್ಲಿಕನ್ ಪಾರ್ಟಿಯ ಹಲವು ಹಿರಿಯ ನೇತಾರರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಡಾ. ರೆಡ್ಡಿ ಅವರು ಸ್ಪರ್ಧೆ ಸಂಬಂಧ ಅಗತ್ಯ ಕಾಗದಪತ್ರ ಸಲ್ಲಿಸುವ ಪ್ರಕ್ರಿಯೆಯನ್ನು ಮೇ 22ರಂದು ಪೂರ್ಣಗೊಳಿಸಿದ್ದಾರೆ. ಇವರು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಪ್ರೋಗ್ರಾಮ್ ಫಾರ್ ಲೀಡರ್‌ಶಿಪ್ ಡೆವಲಪ್‌ಮೆಂಟ್ (ಪಿಎಲ್‌ಡಿ) ಕೋರ್ಸ್ ಪೂರೈಸಿದ್ದಾರೆ.