ಮುಳ್ಳೇರಿಯ: ಆದೂರು ಪೆರುಂಕಳಿಯಾಟ ಮಹೋತ್ಸವಕ್ಕೆ ಭಕ್ತರಿಗೆ ನೀಡಬೇಕಾದ ಅರಶಿನ ಗಂಧಪ್ರಸಾದಕ್ಕೆ ಅವಶ್ಯಕವಾಗಿರುವ ಅರಶಿನಕ್ಕೆ ಅರಶಿನ ಗಿಡವನ್ನು ಕ್ಷೇತ್ರ ಪರಿಸರದಲ್ಲಿ ನೆಡಲಾಯಿತು. ಕ್ಷೇತ್ರದ ಕಾರ್ನವರಾದ ಭಾಸ್ಕರ ಕಾರ್ನವರ್ ಬಿತ್ತನೆಗೆ ನೇತೃತ್ವ ವಹಿಸಿದ್ದರು. ಪೆರುಂಕಳಿಯಾಟ ಮಹೋತ್ಸವ ಸಮಿತಿಯ ಕಾರ್ಯದರ್ಶಿಜನಾರ್ಧನ ನಾಯರ್ ರವರು ಅರಶಿನ ಬೀಜಗಳನ್ನು ಸ್ವೀಕರಿಸಿದರು. ಕೃಷಿಕರಾದ ಜನಾರ್ಧನ್ ನಾಯರ್, ಕುಂಞÂ್ಞ ಕಣ್ಣನ್ ಮಣಿಯಾಣಿ ರವರ ನೇತೃತ್ವದಲ್ಲಿ ಅರಶಿನ ಕೃಷಿಯನ್ನು ಮಾಡಲಾಗುವುದು.ರಘುರಾಂ ರೈ ನಡುಮನೆ, ಪ್ರಕಾಶ್ ಭಂಡಾರಿ, ಕಿರಣ್ ಮಾಡ, ಬಾಲಕೃಷ್ಣ ರಾವ್, ದಯಾನಂದ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.