HEALTH TIPS

ಅನಿವಾಸಿಗರ ಕಲ್ಯಾಣ ನಿಧಿ ಜಾಗತಿಕವಾಗಿರಬೇಕು: ಕುಟುಂಬಶ್ರೀ ಮಾದರಿಯಲ್ಲಿ ಅನಿವಾಸಿ ಮಿಷನ್: ಮುಖ್ಯಮಂತ್ರಿ

               ತಿರುವನಂತಪುರಂ: ಅನಿವಾಸಿಗಳ ಪುನರ್ವಸತಿಗೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಅನಿವಾಸಿ ಗ್ರಾಮ ಸಭೆಗಳನ್ನು ಕರೆದು ಸ್ವ-ಸಹಾಯ ಸಂಘಗಳು, ಸಹಕಾರ ಸಂಘಗಳು ಇತ್ಯಾದಿಗಳನ್ನು ರಚಿಸಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿರುವರು. 

               ಲೋಕ ಕೇರಳ ಸಭೆಯ ಅಂಗವಾಗಿ ಪ್ರತಿನಿಧಿಗಳ ಚರ್ಚೆಗೆ ಮುಖ್ಯಮಂತ್ರಿಗಳು ಉತ್ತರಿಸಿದರು. ಕುಟುಂಬಶ್ರೀ ಮಾದರಿಯಲ್ಲಿ ಅನಿವಾಸಿ ಮಿಷನ್ ರಚನೆಗೆ ಪರಿಶೀಲನೆ ನಡೆಸಿ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

               ಲೋಕ ಕೇರಳ ಸಭೆಯಲ್ಲಿ ಮಂಡಿಸಲಾದ ವಿಚಾರಗಳು ಮತ್ತು ಸಲಹೆಗಳನ್ನು ಅನುಷ್ಠಾನಗೊಳಿಸಲು ವಿಶೇಷ ಕಾಳಜಿ ವಹಿಸಲಾಗುವುದು. ಮುಂದಿನ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಮಾಡಲು ಲೋಕ ಕೇರಳ ಸಭೆಯ ಪ್ರತಿನಿಧಿಗಳನ್ನು ಒಳಗೊಂಡಂತೆ 15 ಸದಸ್ಯರ ಸ್ಥಾಯಿ ಸಮಿತಿಯನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ಅನಿವಾಸಿ ಕಲ್ಯಾಣ ನಿಧಿ ರಚನೆ ಜಾಗತಿಕ ಮಟ್ಟದಲ್ಲಿ ಜಾರಿಯಾಗಬೇಕು. ಅನಿವಾಸಿ ಕಾರ್ಮಿಕರನ್ನು ಕಳುಹಿಸುವ ದೇಶಗಳ ಏಕತೆಯ ಮೂಲಕ ಮಾತ್ರ ಈ ಗುರಿಯನ್ನು ಸಾಧಿಸಬಹುದು ಎಂದರು.

             ಹಬ್ಬ ಹರಿದಿನಗಳಲ್ಲಿ ಉತ್ತರ ಭಾರತದಿಂದ ಕೇರಳಕ್ಕೆ ಹೆಚ್ಚಿನ ರೈಲು ಸಂಚಾರ ಆರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ಲೋಕ ಕೇರಳ ಸಭೆಯ ಪ್ರಾದೇಶಿಕ ಸಮ್ಮೇಳನಗಳನ್ನು ಭಾರತದ ವಿವಿಧ ಭಾಗಗಳಲ್ಲಿ ಪರಿಗಣಿಸಲಾಗುವುದು.

             ವಿಶ್ವವಿದ್ಯಾನಿಲಯಗಳು ಸ್ವಾಯತ್ತ ಸಂಸ್ಥೆಗಳಾಗಿರುವುದರಿಂದ, ಮಲಯಾಳಂ ಪೀಠವನ್ನು ತೆರೆಯುವುದನ್ನು ಆಯಾ ವಿಶ್ವವಿದ್ಯಾಲಯಗಳು ನಿರ್ಧರಿಸಬೇಕು. ಈ ಅಗತ್ಯವನ್ನು ವಿವಿಧ ವಿಶ್ವವಿದ್ಯಾಲಯಗಳೊಂದಿಗೆ ಚರ್ಚಿಸಬಹುದು. ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಲೋಕ ಕೇರಳ ಆನ್‍ಲೈನ್ ವೇದಿಕೆಯನ್ನು ಉದ್ಘಾಟಿಸಿದರು.

              ವಿದೇಶೀ ಆನ್‍ಲೈನ್ ಸಭೆಗಳನ್ನು ನಡೆಸಲು ಕ್ರಮಗಳು ಪ್ರಗತಿಯಲ್ಲಿವೆ. 2019 ರಲ್ಲಿ ಪ್ರಾರಂಭವಾದ ಪ್ರವಾಸಿ ಡಿವಿಡೆಂಡ್ ಯೋಜನೆಯಡಿ, ಸುಮಾರು 315 ಕೋಟಿ ಹೂಡಿಕೆಯನ್ನು ಸ್ವೀಕರಿಸಲಾಗಿದೆ ಮತ್ತು ಕಿಪ್ಭಿ ಗೆ ನೀಡಲಾಗಿದೆ. 2023 ರ ಜನವರಿ ತಿಂಗಳಿನಿಂದ 2019 ರಲ್ಲಿ ಹೂಡಿಕೆದಾರರಿಗೆ ಮಾಸಿಕ ಲಾಭಾಂಶವನ್ನು ಪಾವತಿಸಲು ಪ್ರಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

            ಮೃತ ಅನಿವಾಸಿಗಳ ಅವಲಂಬಿತರು ಮತ್ತು ರೋಗಿಗಳಿಗೆ ಆರ್ಥಿಕ ನೆರವು ನೀಡಲು ಪರಿಹಾರ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಉದ್ಯೋಗ ಕಳೆದುಕೊಂಡವರಿಗೆ ಸಾಲ ನೀಡಿಕೆಗಾಗಿ ಎನ್.ಡಿ. ಪ್ರೇಮ್ ಮತ್ತು ನಾರ್ಕಾ ಪುನರ್ವಸತಿ ಸಮನ್ವಯ ಏಕೀಕರಣ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು. ನೊರ್ಕಾ ವಿಮಾ ಯೋಜನೆ ಸಾಕಾರಗೊಳ್ಳುವುದರೊಂದಿಗೆ ವಲಸಿಗರಿಗೆ ಸಮಗ್ರ ವಿಮಾ ಯೋಜನೆಯ ದೀರ್ಘಾವಧಿಯ ಅಗತ್ಯ ಈಡೇರಲಿದೆ ಎಂದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries