ಜಮ್ಮು: ಭಾರತ ಮತ್ತು ಪಾಕಿಸ್ತಾನದ ಪ್ರತಿನಿಧಿಗಳ ತಂಡಗಳು ತಟಸ್ಥ ತಜ್ಞರೊಂದಿಗೆ ಸೋಮವಾರ ಜಮ್ಮು ಕಾಶ್ಮೀರದ ಕಿಶ್ತವಾಡ ಜಿಲ್ಲೆಗೆ ಭೇಟಿ ನೀಡಿ, ಸಿಂಧೂ ಜಲ ಒಪ್ಪಂದದ ಅಡಿ ನಡೆಯುತ್ತಿರುವ ಎರಡು ಜಲವಿದ್ಯುತ್ ಯೋಜನೆಗಳ ಪರಿಶೀಲನೆ ನಡೆಸಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ಎರಡು ಜಲವಿದ್ಯುತ್ ಯೋಜನೆಗಳ ಪರಿಶೀಲನೆಗಾಗಿ ತಟಸ್ಥ ತಜ್ಞರೊಂದಿಗೆ ಪಾಕಿಸ್ತಾನದ ಪ್ರತಿನಿಧಿಗಳ ತಂಡವು ಭಾನುವಾರ ಇಲ್ಲಿಗೆ ಆಗಮಿಸಿತು. ಅವರೊಂದಿಗೆ ಭಾರತದ ಪ್ರತಿನಿಧಿಗಳು ಸೇರಿ ಒಟ್ಟು 40 ಮಂದಿ ಚೀನಾಬ್ ಕಣಿವೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿತು.
ಮೂವರು ಸದಸ್ಯರ ಪಾಕಿಸ್ತಾನದ ತಂಡವು, ಸಿಂಧೂ ಜಲ ಒಪ್ಪಂದದ ನಿಯಮಗಳ ಅನ್ವಯ ಪಕಲ್ ದುಲ್ ಮತ್ತು ಲೋಯರ್ ಕಲ್ನೈ ಜಲವಿದ್ಯುತ್ ಯೋಜನೆಗಳನ್ನು 2019ರಲ್ಲಿ ಕೊನೆಯ ಬಾರಿಗೆ ಪರಾಮರ್ಶಿಸಿತ್ತು. ಅದಾದ ನಂತರ ಐದು ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ಜಮ್ಮು ಕಾಶ್ಮೀರಕ್ಕೆ ಇದು ಪಾಕಿಸ್ತಾನದ ಪ್ರತಿನಿಧಿಗಳ ಮೊದಲ ಭೇಟಿಯಾಗಿದೆ.
ಪಾಕಿಸ್ತಾನದವರನ್ನೂ ಒಳಗೊಂಡಿರುವ ತಜ್ಞರ ತಂಡವು ಚೀನಾಬ್ ಕಣಿವೆಯ ಕಿಶನ್‌ಗಂಗಾ ಮತ್ತು ರತಲೆ ಜಲವಿದ್ಯುತ್ ಯೋಜನೆಗಳನ್ನು ಪರಿಶೀಲಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.