ಕಾಸರಗೊಡು; ಎರಡು ತಿಂಗಳ ಬೇಸಿಗೆ ರಜೆಯ ನಂತರ ಕೇರಳದಲ್ಲಿ ಜೂನ್ 3ರಂದು ಶೈಕ್ಷಣಿಕ ಸಂಸ್ಥೆಗಳು ಮತ್ತೆ ತೆರೆದುಕೊಳ್ಳಲಿದೆ. ಕಾಸರಗೋಡು ಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ ಕಾರ್ಯಕ್ರಮ ಕೋಡೋತ್ ಡಾ. ಅಂಬೇಡ್ಕರ್ ಸ್ಮಾರಕ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ.
ಕಾಸರಗೋಡು ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳ ಸುರಕ್ಷತೆ ಬಗ್ಗೆ ಈಗಾಗಲೇ ಸಹಾಯಕ ಜಿಲ್ಲಾಧಿಕಾರಿ, ಜಿಲ್ಲಾ ಶಿಕ್ಷಣಾಧಿಕಾರಿ, ಜಿಲ್ಲಾ ಶಿಕ್ಷಣ ಉಪನಿರ್ದೇಶಕರ ಕಚೇರಿ ಸಿಬ್ಬಂದಿ ಮಾಹಿತಿ ಸಂಗ್ರಹಿಸಿ ಅಗತ್ಯ ಸರ್ಟಿಫಿಕೇಟ್ ಒದಗಿಸಿದ್ದಾರೆ. ಶಾಲಾ ತರಗತಿ ಕೊಠಡಿ, ಅಡುಗೆ ಕೊಠಡಿ, ಶೌಚಗೃಹದ ಶುಚೀಕರಣ ಕಾರ್ಯಗಳ ಬಗ್ಗೆಯೂ ಅವಲೋಕನ ನಡೆಸಲಾಗಿದೆ. ಶಾಲೆ ಆಸುಪಾಸು ಶುಚೀಕರಣ, ಶಾಲಾ ಕಟ್ಟಡಗಳ ಸುತ್ತು ಅಪಾಯಕಾರಿ ಮರಗಳ ತೆರವುಗೊಳಿಸುವ ಬಗ್ಗೆಯೂ ಆಯಾ ಶಾಲೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಬಗ್ಗೆ ಶಾಲಾ ರಕ್ಷಕ ಶಿಕ್ಷಕ ಸಂಘಗಳಿಗೂ ಪ್ರತ್ಯೇಕ ನಿರ್ದೇಶ ನೀಡಲಾಗಿದೆ.