HEALTH TIPS

ಹಗ್ಗ ಕಡಿದು ಓಡುವ ಮಧ್ಯೆ ಬಾವಿಗೆ ಬಿದ್ದ ಕೋಣ-ಅಗ್ನಿಶಾಮಕ ದಳದಿಂದ ರಕ್ಷಣೆ : ಕಸಾಯಿಖಾನೆಗೆ ಸಾಗಿಸುವ ಮಧ್ಯೆ ಘಟನೆ

             ಕಾಸರಗೋಡು: ಕಸಾಯಿಖಾನೆಗೆ ಸಾಗಿಸುತ್ತಿದ್ದ ಕೋಣವೊಂದು ಹಗ್ಗ ತುಂಡರಿಸಿ ಓಡುವ ಮಧ್ಯೆ ಆರಣಗೋಡೆಯಿಲ್ಲದ ಬಾವಿಗೆ ಬಿದ್ದಿದೆ. ಕಾಸರಗೋಡು ವಿದ್ಯಾನಗರದ ಪಡುವಡ್ಕದಲ್ಲಿ ಘಟನೆ ನಡೆದಿದ್ದು, ಅಗ್ನಿಶಾಮಕ ದಳದ ಸಕಾಲಿಕ ಕಾರ್ಯಾಚರಣೆಯಿಂದ ಕೋಣವನ್ನು ಬಾವಿಯಿಂದ ಮೇಲಕ್ಕೆತ್ತಿ ರಕ್ಷಿಸಲಾಗಿದೆ.

            ಕಸಾಯಿಖಾನೆಗೆ ಕೋಣವನ್ನು ಕೊಂಡೊಯ್ಯುವ ಮಧ್ಯೆ, ಹಗ್ಗ ತುಂಡರಿಸಿ ಓಡಿದ ಕೋಣ ಸುಮಾರು 25ಅಡಿ ಆಳದ ಬಾವಿಗೆ ಬಿದ್ದಿದೆ. ಬಾವಿಯಲ್ಲಿ ಹತ್ತು ಅಡಿಗಳಷ್ಟು ನೀರೂ ತುಂಬಿಕೊಮಡಿತ್ತು. ಕೋಣದ ಮಾಲಿಕರಾದ ಅಬೂಬಕ್ಕರ್ ಹಾಗೂ ಶಾಬಿರ್ ನೀಡಿದ ಮಾಹಿತಿಯನ್ವಯ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಎರಡು ತಾಸುಗಳ ಕಾರ್ಯಾಚರಣೆಯಿಂದ ಕೋಣವನ್ನು ಮೇಲಕ್ಕೆತ್ತಿದ್ದಾರೆ. ಅಗ್ನಿಶಾಮಕ ದಳದ ಫಯರ್ ಆ್ಯಂಡ್ ರಿಸ್ಕ್ಯೂ ಅಧಿಕಾರಿ ವಿ.ಎಸ್ ವೇಣುಗೋಪಾಲನ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries