ಪೆರ್ಲ: ಶೇಣಿ ಶ್ರೀ ಶಾರದಾಂಬ ಎಯುಪಿ ಶಾಲಾ ಪ್ರವೇಶೋತ್ಸವ ವರ್ಷರಂಜಿತವಾಗಿ ಜರಗಿತು. ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ನಾಯಕ್ ಜೆ.ಎಸ್.ಶೇಣಿ ಅವರ ನೇತೃತ್ವದಲ್ಲಿ ಶಾಲಾ ಶಿಕ್ಷಕ ವೃಂದದ ಸಹಕಾರ ಹಾಗೂ ರಕ್ಷಕರು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಉತ್ಸವದ ಪ್ರತೀತಿ ಮೂಡಿಸಿತು. ನವಾಗತರಾದ ವಿದ್ಯಾರ್ಥಿಗಳಿಗೆ ಸಿಟಿ ಜ್ಯುವೆಲ್ಲರಿ ಪೆರ್ಲ ಪ್ರಾಯೋಜಿಸಿದ ಕಲಿಕೋಪಕರಣವನ್ನು ಶಾಲಾ ಆಡಳಿತ ಸಮಿತಿಯ ಪದಾಧಿಕಾರಿ, ನಿವೃತ್ತ ಮುಖ್ಯೋಪಾಧ್ಯಾಯಿನಿ ಶಾರದ ವೈ. ವಿತರಿಸಿದರು.