HEALTH TIPS

ತುರ್ತು ಪರಿಸ್ಥಿತಿ ದಿನಗಳನ್ನು ನೆನಪಿನಲ್ಲಿಡಬೇಕು: ಸುನಿಲ್‌ ಅಂಬೇಕರ್

Top Post Ad

Click to join Samarasasudhi Official Whatsapp Group

Qries

        ವದೆಹಲಿ: 'ಪ್ರಜಾಸತ್ತಾತ್ಮಕ ವ್ಯವಸ್ಥೆ ಮತ್ತು ಹಕ್ಕುಗಳು ಅಪಾಯದಲ್ಲಿರುವ ಸಂದರ್ಭದ ಸೃಷ್ಟಿಗೆ ಕಾರಣವಾದ 'ಜನರು, ಅವರ ಒಲವು ಮತ್ತು ಅದಕ್ಕೆ ಕಾರಣಗಳನ್ನು ತಿಳಿಯಲು 1975ರಲ್ಲಿ ಹೇರಲಾದ ತುರ್ತುಪರಿಸ್ಥಿತಿಯ ದಿನಗಳನ್ನು ಸದಾ ನೆನಪಿನಲ್ಲಿಡಬೇಕು ಎಂದು ಆರ್‌ಎಸ್‌ಎಸ್‌ನ ಹಿರಿಯ ಮುಖಂಡ ಸುನಿಲ್‌ ಅಂಬೇಕರ್ ಹೇಳಿದರು.

           ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಪಕ್ಷವನ್ನು ಪರೋಕ್ಷವಾಗಿ ಉಲ್ಲೇಖಿಸಿ, 'ಭಾರತ ಸ್ವತಂತ್ರ ಗಣರಾಜ್ಯವಾದ 25 ವರ್ಷಗಳ ಒಳಗೆ ತುರ್ತು ಪರಿಸ್ಥಿತಿಯನ್ನು ಹೇರಲಾಯಿತು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಅಪಾಯಕ್ಕೆ ದೂಡಲಾಯಿತು' ಎಂದು ಹೇಳಿದರು.

'ಈ ಬೆದರಿಕೆ ವಿದೇಶದಿಂದ ಬಂದಿದ್ದಲ್ಲ; ನಮ್ಮದೇ ರಾಜಕೀಯ ವ್ಯವಸ್ಥೆಯಿಂದ ಬಂದೊದಗಿತ್ತು' ಎಂದರು.

               ಆರ್‌ಎಸ್‌ಎಸ್‌ ಅಂಗಸಂಸ್ಥೆ ಇಂದ್ರಪ್ರಸ್ಥ ವಿಶ್ವ ಸಂವಾದ ಕೇಂದ್ರದಲ್ಲಿ ಆಯೋಜಿಸಿದ್ದ ವಾರ್ಷಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

             'ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾನು ಚಿಕ್ಕವನಿದ್ದೆ. ದೇಶದ ವಿದ್ಯಾರ್ಥಿಗಳು, ಸಂಘದ ಸ್ವಯಂ ಸೇವಕರು, ಜನರು, ಪ್ರತಿಯೊಬ್ಬರೂ ಈ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದರು. ಹಲವಾರು ರೀತಿಯ ಕಿರುಕುಳ ಅನುಭವಿಸಿದರು' ಎಂದು ಹೇಳಿದರು.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries