ನವದೆಹಲಿ: ಕಮ್ಯುನಿಸ್ಟ್ ಪಕ್ಷದ ಪ್ರಾಬಲ್ಯವಿರುವ ದೇವರನಾಡು ಕೇರಳದಲ್ಲಿ ಇದುವರೆಗೂ ಬಿಜೆಪಿ ಒಂದು ಲೋಕಸಭಾ ಕ್ಷೇತ್ರವನ್ನು ಗೆದ್ದಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಕೇರಳದಲ್ಲಿ ಕಮಲ ಅರಳಿಸುವ ಸೂಚನೆಯನ್ನು ಎಕ್ಸಿಟ್ ಪೋಲ್ ನೀಡಿದೆ.
ಕೇರಳದಲ್ಲಿ ಬಿಜೆಪಿ ಒಂದು ಸೀಟ್ ಗೆಲ್ಲೋದು ಕಷ್ಟ ಅಂತಿದ್ದವರಿಗೆ ಈ ಬಾರಿಯ ಎಕ್ಸಿಟ್ ಪೋಲ್ ನಲ್ಲಿ ತಕ್ಕ ಉತ್ತರ ಸಿಕ್ಕಿದೆ ಅಂತ ಹೇಳಲಾಗಿದೆ. ಕೇರಳದಲ್ಲಿ ಬಿಜೆಪಿ ಭಾರೀ ಬೆಳವಣಿಗೆಯಾಗಿದ್ದು ಭಾರತೀಯ ಜನತಾ ಪಕ್ಷ 3 ಸ್ಥಾನ ಗೆಲ್ಲಬಹುದು ಅಂತ ಇಂಡಿಯಾ ಟುಡೇ ಸಮೀಕ್ಷೆ ಹೇಳಿದೆ.
ದಕ್ಷಿಣ ಭಾರತದ ಪ್ರಮುಖ ರಾಜ್ಯವಾಗಿರುವ ಕೇರಳದಲ್ಲಿ ಇಂಡಿಯಾ ಒಕ್ಕೂಟ ನಿಚ್ಚಳ ಮೇಲುಗೈ ಸಾಧಿಸಲಿದೆ ಎಂದು ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಭವಿಷ್ಯ ನುಡಿದಿದೆ. ಕೇರಳದಲ್ಲಿ ಯುಡಿಎಫ್ ಶೇ 41, ಎನ್‌ಎ ಶೇ 27, ಎಲ್‌ಡಿಎಫ್ ಶೇ 29, ಇತರರು ಶೇ 3 ರಷ್ಟು ಮತ ಗಳಿಸಲಿದ್ದಾರೆ. ಯುಡಿಎಫ್- 17-19, ಎಲ್‌ಡಿಎಫ್ 0-1, ಎನ್‌ಡಿಎ 2-3 ಸ್ಥಾನ ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಬಿಜೆಪಿಯು ಇದೇ ಮೊದಲ ಬಾರಿಗೆ ಕೇರಳದಲ್ಲಿ ಸ್ಥಾನಗಳಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ದಕ್ಷಿಣದ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳದಲ್ಲಿ ಮೊದಲ ಬಾರಿಗೆ ಖಾತೆ ತೆರೆಯಲಿದೆ ಎನ್ನಲಾಗಿದೆ. ಒಟ್ಟಾರೆಯಾಗಿ ದಕ್ಷಿಣದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 57-65 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಇಂಡಿಯ ಬ್ಲಾಕ್ 59-66 ಸ್ಥಾನ ಗೆಲ್ಲುವ ಸಾಧ್ಯತೆಯಿದೆ.
2019ರ ಚುನಾವಣೆಯಲ್ಲಿ ಕಾಂಗ್ರೆಸ್ ಕೇರಳದಲ್ಲಿ ಬಹುಪಾಲು ಸ್ಥಾನಗಳನ್ನು ಪಡೆದುಕೊಂಡಿತ್ತು. ಆದರೆ, ಎನ್ಡಿಎಗೆ ಒಂದೇ ಒಂದು ಸ್ಥಾನವೂ ಸಿಕ್ಕಿರಲಿಲ್ಲ.
ಇಂಡಿಯಾ ಟುಡೇ
UDF: 4
LDF: 0-1
BJP 2-3
Congress: 13-14
CNN ನ್ಯೂಸ್
UDF: 15-18
LDF: 2-5
NDA: 1-3
Tv9 Polstrat
NDA - 1
UDF- 19
LDF - 00