HEALTH TIPS

ಹವಾಮಾನ ಬದಲಾವಣೆಯ ಉತ್ತುಂಗ: ನಮ್ಮೀ ಭೂಮಿ ಹಳೆಯ ಭೂಮಿಯಲ್ಲ; ಭೂಮಿಯು ಉದ್ಧಾರವಾಗಲಿ; ಇಂದು ವಿಶ್ವ ಪರಿಸರ ದಿನ

         

                 ಇಂದು ಜೂನ್ 5 - ವಿಶ್ವ ಪರಿಸರ ದಿನ. ಈ ವರ್ಷದ ವಿಶ್ವ ಪರಿಸರ ದಿನದ ವಿಷಯ ‘ಭೂಮಿ ಪುನಃಸ್ಥಾಪನೆ- ಮರುಭೂಮೀಕರಣ, ಬರಗಳ ನಿಯಂತ್ರಣ’ ಎಂಬುದಾಗಿದೆ.

ಜೂನ್‌ 5 ರಂದು ವಿಶ್ವ ಪರಿಸರ ದಿನ ಆಚರಿಸುವುದೇಕೆ?

1972ರಲ್ಲಿ ಜೂನ್‌ 5 ರಂದು ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಮಾನವ ಪರಿಸರ ಸಂಬಂಧದ ಕುರಿತು ವಿಶ್ವಸಂಸ್ಥೆಯು ಸಮ್ಮೇಳನವೊಂದನ್ನು ನಡೆಸಿತ್ತು. ಈ ದಿನವನ್ನು ಗೌರವಿಸಿ 1973ರಲ್ಲಿ ಪ್ರಪಂಚದಾದ್ಯಂತದ ಮೊದಲ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಆ ದಿನವನ್ನು ವಿಶ್ವ ಪರಿಸರ ದಿನ ಎಂದು ಆಚರಿಸಲಾಗುತ್ತದೆ. 

*ವಿಶ್ವ ಪರಿಸರ ದಿನ 2024ರ ಥೀಮ್‌*
ಪ್ರತಿ ವರ್ಷ ಹವಾಮಾನ ಬದಲಾವಣೆಯಿಂದ, ಜಾಗತಿಕ ತಾಪಮಾನ ಏರಿಕೆಯಿಂದ ಅರಣ್ಯನಾಶದವರೆಗೆ ತಕ್ಷಣದ ಸಮಸ್ಯೆಗಳನ್ನು ಗುರಿಯಾಗಿಟ್ಟುಕೊಂಡು ನಿರ್ದಿಷ್ಟ ಥೀಮ್‌ನೊಂದಿಗೆ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ, ವಿಶ್ವ ಪರಿಸರ ದಿನದ ಥೀಮ್ - ಭೂಮಿ ಪುನಃಸ್ಥಾಪನೆ, ಮರುಭೂಮೀಕರಣ ಮತ್ತು ಬರ ಸ್ಥಿತಿಸ್ಥಾಪಕತ್ವ. ಯುಎನ್‌ ಕನ್ವೆಷನ್‌ ಪ್ರಕಾರ ಭೂಮಿಯು ಈಗಾಗಲೇ ಶೇ 40 ರಷ್ಟು ಕ್ಷೀಣಿಸಿದೆ. ಇದು ಪ್ರಪಂಚದ ಅರ್ಧದಷ್ಟು ಜನಸಂಖ್ಯೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಬರಗಾಲದ ಅವಧಿಯು 2000ನೇ ಇಸವಿಯಿಂದ ಶೇ 29 ರಷ್ಟು ಹೆಚ್ಚಾಗಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳದೇ ಹೋದಲ್ಲಿ 2050ರ ವೇಳೆಗೆ ವಿಶ್ವದ ಜನಸಂಖ್ಯೆಯ ಮಕ್ಕಾಲು ಭಾಗದಷ್ಟು ಜನರ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ವ ಸಂಸ್ಥೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದೆ.

          ನಾವು ಹವಾಮಾನ ಬದಲಾವಣೆಯ ದಿನಗಳನ್ನು ಹಾದುಹೋಗುತ್ತಿದ್ದೇವೆ. ಈ ಸಂದರ್ಭದಲ್ಲಿ ಭೂಮಿಯ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆರೋಗ್ಯವಂತ ಜನಸಂಖ್ಯೆಗೆ ಆರೋಗ್ಯಕರ ಪರಿಸರ ಅತ್ಯಗತ್ಯ. ಆರೋಗ್ಯಕರ ಗ್ರಹಕ್ಕೆ ಮರಗಳು, ಮಣ್ಣು ಮತ್ತು ಶುದ್ಧ ನೀರು ಮುಖ್ಯ. ಈ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿದ ಕೆಲಸವು ಯುಎನ್ ಇಪಿಯು 2021 ರಿಂದ ದಶಕವನ್ನು ಪರಿಸರ ಪುನಃಸ್ಥಾಪನೆಯ ದಶಕ ಎಂದು ಘೋಷಿಸಿದ ಭಾಗವಾಗಿದೆ.

       ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಕ್ರಿಯಾ ಕಾರ್ಯಕ್ರಮಗಳನ್ನು ಯೋಜಿಸಲು ಪರಿಸರ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು 1972 ರಿಂದ ವಿಶ್ವ ಪರಿಸರ ದಿನವನ್ನು ಪ್ರಾರಂಭಿಸಿದೆ. ಅಮೆರಿಕದಲ್ಲಿ ಮೊದಲ ಬಾರಿಗೆ ಪರಿಸರ ದಿನವನ್ನು ಆಚರಿಸಲಾಯಿತು.

        1972 ರಲ್ಲಿ ಸ್ಟಾಕ್‍ಹೋಮ್‍ನಲ್ಲಿ ನಡೆದ ಮಾನವ ಪರಿಸರದ ಮೇಲಿನ ವಿಶ್ವಸಂಸ್ಥೆಯ ಮೊದಲ ಸಮ್ಮೇಳನದ ವಿಷಯ 'ಒಂದು ಭೂಮಿ'. ಇದು ಜಾಗತಿಕ ಕಾರ್ಯಸೂಚಿಯಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಇರಿಸಿತು ಮತ್ತು ವಿಶ್ವ ಪರಿಸರ ದಿನದ ಸ್ಥಾಪನೆಗೆ ಕಾರಣವಾಯಿತು. ಜಗತ್ತು ಪರಿಸರ ಬಿಕ್ಕಟ್ಟನ್ನು ಎದುರಿಸುತ್ತಿರುವ ಈ ಸಮಯದಲ್ಲಿ, ಪರಿಸರ ದಿನದ ಮಹತ್ವ ಮತ್ತು ಸಂದೇಶವು ಅದ್ಭುತವಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries