HEALTH TIPS

ಸಂಸತ್ತಿನಲ್ಲಿ ರಾಷ್ಟ್ರಪತಿ ಭಾಷಣ: ಭಾರತೀಯರು ಮೂರನೇ ಬಾರಿಗೆ ಸ್ಪಷ್ಟ ಹಾಗೂ ಸ್ಥಿರ ಜನಾದೇಶ ನೀಡಿದ್ದಾರೆ: ರಾಷ್ಟ್ರಪತಿ

             ವದೆಹಲಿ: ದೇಶದ ಜನರು ನರೇಂದ್ರ ಮೋದಿ ಸರ್ಕಾರಕ್ಕೆ ಮೂರನೇ ಬಾರಿಗೆ ಸ್ಪಷ್ಟ ಹಾಗೂ ಸ್ಥಿರ ಅಧಿಕಾರ ನೀಡಿದ್ದಾರೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.

           ಲೋಕಸಭೆ ಹಾಗೂ ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಅವರು ಗುರುವಾರ ಮಾತನಾಡಿದರು.

         ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿದ ಜಮ್ಮು ಮತ್ತು ಕಾಶ್ಮೀರದ ಜನತೆಗೂ ರಾಷ್ಟ್ರಪತಿ ಅಭಿನಂದನೆ ಸಲ್ಲಿಸಿದರು.

 ‍           ಪ್ರಪಂಚದ ಅತೀ ದೊಡ್ಡ ಪ‍್ರಜಾಪ್ರಭುತ್ವದ ಚುನಾವಣೆ‌ಯನ್ನು ಯಶಸ್ವಿಯಾಗಿ ನಡೆಸಿದ್ದಕ್ಕೆ ಚುನಾವಣಾ ಆಯೋಗಕ್ಕೂ ಅವರು ಅಭಿನಂದನೆ ಸಲ್ಲಿಸಿದರು.

            'ಈ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಿನ ಮತದಾನವಾಗಿದೆ. ದಶಕಗಳ ಮತದಾನದ ದಾಖಲೆಗಳು ಪತನವಾಗಿವೆ' ಎಂದರು.

                ಪ್ರಥಮ ಬಾರಿಗೆ ಆಯ್ಕೆಯಾದ ಸಂಸದರಿಗೆ ಅಭಿನಂದನೆ ಸಲ್ಲಿಸಿದ ಅವರು, ನೀವು ದೇಶದ ಜನರ ಆಶೋತ್ತರಗಳನ್ನು ಈಡೇರಿಸುವ ಮಾಧ್ಯಮವಾಗಿ ಕೆಲಸ ನಿರ್ವಹಿಸುವ ಭರವಸೆ ಇದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

          'ಕಳೆದ ನಾಲ್ಕು ದಶಕಗಳಲ್ಲಿ, ಕಾಶ್ಮೀರದಲ್ಲಿ ಮುಷ್ಕರಗಳು ಮತ್ತು ಬಂದ್‌ಗಳಿಂದಾಗಿ ಕಡಿಮೆ ಮತದಾನ ಪ್ರಮಾಣವನ್ನು ನಾವು ನೋಡಿದ್ದೇವೆ. ಭಾರತದ ಶತ್ರುಗಳು ಇದನ್ನು ಜಾಗತಿಕ ವೇದಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಅಭಿಪ್ರಾಯ ಎಂದು ಬಿಂಬಿಸುತ್ತಿದ್ದರು. ಈ ಬಾರಿ ಜಮ್ಮು ಮತ್ತು ಕಾಶ್ಮೀರದ ಜನರು ಅಂತಹ ಶಕ್ತಿಗಳಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ' ಎಂದು ಅವರು ಹೇಳಿದರು.

             2024ರ ಚುನಾವಣೆಯ ಬಗ್ಗೆ ಇಡೀ ಜಗತ್ತು ಮಾತನಾಡುತ್ತಿದೆ. ಭಾರತೀಯರು ಮೂರನೇ ಬಾರಿಗೆ ಸ್ಥಿರ ಹಾಗೂ ಸ್ಪಷ್ಟ ಅಧಿಕಾರ ನೀಡಿರುವುದನ್ನು ಜಗತ್ತು ನೋಡುತ್ತಿದೆ ಎಂದು ಮುರ್ಮು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries