ಮುಳ್ಳೇರಿಯ: ಮುಳಿಯಾರು ಪಂಚಾಯಿತಿಯ ಬಾವಿಕೆರೆಯಲ್ಲಿ ಚಿರತೆ ಕಂಡುಬಂದಿರುವ ಬಗ್ಗೆ ವದಂತಿ ಹರಡಿದ್ದು, ನಾಗರಿಕರಲ್ಲಿ ಆತಂಕ ಎದುರಾಗಿದೆ. ಎಡು ದಿವಸಗಳ ಹಿಂದೆಯಷ್ಟೆ ಬೊವಿಕ್ಕಾನ ಬೇಪು ತೋಣಿಪಳ್ಳ ಎಂಬಲ್ಲಿ ಸಾಕುನಾಯಿಯನ್ನು ವನ್ಯಮೃಗವೊಂದು ಎತ್ತಿಕೊಂಡು ಹೋಗಿದ್ದು, ಇದು ಚಿರತೆ ಆಗಿರಬೇಕೆಂದು ಸಂಶಯಿಸಲಾಗಿತ್ತು. ಪಾಣೂರು ತೈರೆ ಎಂಬಲ್ಲಿ ಆಟೋರಿಕ್ಷಾ ಚಾಲಕರೊಬ್ಬರು ರಸ್ತೆಗೆ ಅಡ್ಡ ಸಂಚರಿಸಿದ ಚಿರತೆ ಕಂಡಿರುವುದಾಗಿ ತಿಳಿಸಿದ್ದು, ಇದರಿಂದ ನಾಗರಿಕರಲ್ಲಿ ಭೀತಿ ಹೆಚ್ಚಲು ಕಾರಣವಾಗಿದೆ. ಈ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳೂ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.