ಬದಿಯಡ್ಕ: ಅನಂತಶ್ರೀ ಟ್ರಸ್ಟ್ ಕೊಲ್ಲಂಗಾನ ವತಿಯಿಂದ ಅನಂತಶ್ರೀ ಸಪ್ತಮ ವಾರ್ಷಿಕೋತ್ಸವ ಜೂ 15ರಂದು ಕೊಲ್ಲಂಗಾನ ಅನಂತಶ್ರೀಯಲ್ಲಿ ಜರುಗಲಿರುವುದು. ಬೆಳಗ್ಗೆ 9ಕ್ಕೆ ಬ್ರಹ್ಮಶ್ರೀ ಪದ್ಮನಾಭ ಬರ್ಲಾಯ ಬೊಳ್ಳಾರು ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆ ನೀಡುವರು. ನಂತರ ಭಜನಾಸಂಕೀರ್ತನೆ ನಡೆಯುವುದು.
ಮಧ್ಯಾಹ್ನ 12.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೇರಳ ಸರ್ಕಾರದ ನಿವೃತ್ತ ಕಾರ್ಯದರ್ಶಿ ಕೆ. ಗೋಪಾಲಕೃಷ್ಣ ಭಟ್ ಐ.ಎ.ಎಸ್ ಉದ್ಘಾಟಿಸುವರು. ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ಅಧಿಕಾರಿ ಡಾ. ಮುರಳೀಧರ ನಲ್ಲೂರಾಯ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ತಂತ್ರಿ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ, ಪುರೋಹಿತ ಸುರೇಶ ಶಿತ್ತಿಲ್ಲಾಯ, ಗಡಿನಾಡ ಸಾಹಿತ್ಯ-ಸಾಂಸ್ಕøತಿಕ ಅಕಾಡಮಿ ಅಧ್ಯಕ್ಷ ಚನಿಯಪ್ಪ ನಾಯ್ಕ್ ಗೌರವ ಉಪಸ್ಥಿತರಿರುವರು. ಈ ಸಂದರ್ಭ ಧಾರ್ಮಿಕ ಮುಂದಾಳು ಅರಿಬೈಲ್ ಗೋಪಾಲ ಶೆಟ್ಟಿ, ನಿವೃತ್ತ ಬ್ಯಾಂಕ್ ಅಧಿಕಾರಿ ಪ್ರೊ. ಮಾಧವ ರಾವ್, ಉದ್ಯಮಿ ಶ್ರೀಧರ ಶೆಟ್ಟಿ ಮುಟ್ಟಂ, ಜ್ಯೋತಿಷಿ ಸುಕುಮಾರ ಆಲಂಪಾಡಿ, ಸಂಗೀತ ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯ ಅವರನ್ನು ಸನ್ಮಾನಿಸಲಾಗುವುದು. ಮಧ್ಯಾಹ್ನ 2.30ರಿಂದ ಬಹುಭಾಷಾ ಕವಿಗೋಷ್ಠಿ, ಸಂಜೆ 6ಕಕೆ ಕುಣಿತ ಭಜನೆ, 7ಕ್ಕೆ ನೃತ್ಯಾರ್ಪಣಂ, 7.30ಕೆಕ ತಿರುವಾದಿರ, ರಾತ್ರಿ 8ಕ್ಕೆ ಶ್ರೀದುರ್ಗಾಪೂಜೆ, ಶ್ರೀ ಸತ್ಯನಾರಾಯಣ ಪೂಜೆ, 8.30ಕ್ಕೆ ಸಾಮಸ್ಕøತಿಕ ಸಮ್ಮಿಲನ-ಸಮಾರೋಪ ನಡೆಯುವುದು.