ಕಾಸರಗೋಡು: ವಿದ್ಯಾನಗರ ಸಿವಿಲ್ ಸ್ಟೇಷನ್ ನೌಕರರಿಗಾಗಿ ಕ್ಯಾಂಟೀನನ್ನು ಒಂದು ವರ್ಷ ಕಲಾವಧಿ ವರೆಗೆ ಮುನ್ನಡೆಸಲು ನಿಗದಿತ ಅರ್ಜಿ ನಮೂನೆಯೊಂದಿಗೆ, ನೀಡಲಾದ ಷರತ್ತುಗಳಿಗೆ ಒಳಪಟ್ಟು ಆಹಾರ ಪದಾರ್ಥ ಒದಗಿಸಲು, ವೃತ್ತಿಪರಿಚಯವುಳ್ಳ ಸಂಸ್ಥೆಗಳಿಂದ ಕೊಟೇಶನ್ ಆಹ್ವಾನಿಸಲಾಗಿದೆ.
ಗುರುತಿನ ದಾಖಲೆಗಳ ಪ್ರತಿ ಮತ್ತು ಇಎಮ್‍ಡಿ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಸಲ್ಲಿಸಬೇಕು. ಜುಲೈ 20 ರಂದು ಮಧ್ಯಾಹ್ನ 3 ಗಂಟೆಯೊಳಗೆ ಕಾಸರಗೋಡು ಕಲೆಕ್ಟರೇಟ್‍ಗೆ ಕೊಟೇಶನ್‍ಗಳನ್ನು ಸಲ್ಲಿಸಬೇಕು. ಸಂಜೆ 4 ಗಂಟೆಗೆ ಕೊಟೇಶನ್ ತೆರೆಯಲಾಗುವುದು ಎಂದು ಪ್ರಕಟಣೆ ತಿಳಿಸಿದೆ.