ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಎ. ಯು. ಪಿ ಶಾಲೆಯಲ್ಲಿ ಪಿ.ಎನ್ ಪಣಿಕ್ಕರ್ ಚರಮ ದಿನದ ಅಂಗವಾಗಿ ವಾಚನಾ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆ ಶಾಲಾ ರಾಮಕೃಷ್ಣ ರಾವ್ ವೇದಿಕೆಯಲ್ಲಿ ಜರಗಿತು.ಮುಖ್ಯ ಅಥಿತಿಗಳಾಗಿ ಎಸ್.ವಿ.ವಿ ಎಚ್.ಎಸ್.ಎಸ್ ಮೀಯಪದವಿನ ನಿವೃತ್ತ ಮುಖ್ಯೋಪಾಧ್ಯಾಯ ಶಿವಶಂಕರ ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ನೌಕರ ಸಂಘದ ಕಾರ್ಯದರ್ಶಿ ಎಸ್. ಎಸ್ ಪ್ರಸಾದ್, ಗ್ರಂಥಾಲಯ ಕನ್ವಿನರ್ ಸೌಮ್ಯ ಟೀಚರ್ ಹಾಗೂ ಎಲ್. ಪಿ ವಿಭಾಗದ ಎಸ್ ಆರ್ ಜಿ ಸ್ವಾತಿ ಟೀಚರ್ ಉಪಸ್ಥಿತರಿದ್ದರು. ಶಾಲಾ ಅಧ್ಯಾಪಕಿ ಅರ್ಪಿತಾ ವಾಚನಾ ದಿನದ ಪ್ರತಿಜ್ಞೆಯನ್ನು ವಾಚಿಸಿದರು. ಶಾಲಾ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ ಶುಭಹಾರೈಸಿ ಅತಿಥಿಗಳನ್ನು ಸ್ವಾಗತಿಸಿದರು. ಕೃಷ್ಣ ಶರ್ಮ.ಕೆ ವಂದಿಸಿದರು. ಅಧ್ಯಾಪಕ ಸುನಿಲ್ ಕುಮಾರ್ ನಿರೂಪಿಸಿದರು. ಜೂನ್ 19ರಿಂದ ಜೂನ್ 26ರ ವರೆಗೆ ವಾಚನಾ ವಾರದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಶಾಲೆಯಲ್ಲಿ ಜರಗಲಿರುವುದು. ಜೂನ್ 26ರಂದು ಸಪ್ತಾಹದ ಸಮಾರೋಪ ಸಮಾರಂಭ ನಡೆಯಲಿದೆ.