ಕುಂಬಳೆ: ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಯೋಗದಿನಾಚರಣೆ ನಡೆಯಿತು. ಸಂವಿತ್ ಫೌಂಡೇಶನ್ ಬೆಂಗಳೂರು ಇದರ ಸಂಯೋಜಕ ಚಂದ್ರಶೇಖರ್ ದೇಲಂಪಾಡಿ ಉದ್ಘಾಟಿಸಿ ಮಾತನಾಡಿ ಭಾರತ ಯೋಗದ ತವರೂರು. ಮನುಷ್ಯರ ಜೀವನ ಸರಿಯಾಗಿರಬೇಕಿದ್ದರೆ ಯೋಗ ನಮ್ಮೊಂದಿಗಿರಬೇಕು. ಧ್ಯಾನದ ಮೂಲಕ ದೇವರನ್ನು ಮೆಚ್ಚಿಸಿದರೆ ಯೋಗದ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದರು. ವಿದ್ಯಾರ್ಥಿಗಳು ಯೋಗದ ಮಹತ್ವದ ಬಗ್ಗೆ ತಿಳಿದಿರಬೇಕು ಎಂದರಲ್ಲದೆ, ನಮ್ಮ ದೇಶವು ಯೋಗದಲ್ಲಿ ವಿಶ್ವಕ್ಕೆ ಮಾದರಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.
ಆಡಳಿತ ಸಮಿತಿ ಕಾರ್ಯದರ್ಶಿ ಶ್ಯಾಮರಾಜ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು.ಸಂಸ್ಕøತ ಅಧ್ಯಾಪಕ ಬಾಲಕೃಷ್ಣ ಶರ್ಮ ಅನಂತಪುರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಮುಖ್ಯೋಪಾಧ್ಯಾಯ ಶ್ಯಾಮಭಟ್ ದರ್ಭೆ ಮಾರ್ಗ ಉಪಸ್ಥಿತರಿದ್ದರು. ಅಧ್ಯಾಪಿಕೆ ಶರಣ್ಯ ನಿರೂಪಿಸಿ, ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ನಿರ್ವಹಿಸಿದರು. ಯೋಗ ಅದ್ಯಾಪಿಕೆ ಸಂಯೋಜಿಸಿದರು. ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು.