ನ್ಯೂಯಾರ್ಕ್: ಇಡೀ ಜಗತ್ತಿನ ಕ್ರಿಕೆಟ್ ಪ್ರೇಮಿಗಳು ನಿರೀಕ್ಷಿಸುತ್ತಿದ್ದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಆರು ರನ್ ಗಳ ಅಂತರದಿಂದ ಸೋಲಿಸಿದೆ. ಇದರಿಂದಾಗಿ ಭಾರತದ ಸೂಪರ್-8 ಹಾದಿ ಸುಗಮವಾದಂತಾಗಿದೆ.

ಕೇವಲ 19 ಓವರ್ ಗಳಲ್ಲಿ ಕೇವಲ 119 ರನ್ ಗಳಿಗೆ ಭಾರತ ಕುಸಿದಾಗ ಅಭಿಮಾನಿಗಳಲ್ಲಿ ಆತಂಕ ಮೂಡಿತ್ತು.
ಬೂಮ್ರಾ ಜೀವನಶ್ರೇಷ್ಠ ಪ್ರದರ್ಶನ ನೀಡಿ 31 ರನ್ ಗಳೊಂದಿಗೆ ಬ್ಯಾಟ್ ಮಾಡುತ್ತಿದ್ದ ಅಪಾಯಕಾರಿ ಬ್ಯಾಟ್ಸ್ ಮನ್ ಮೊಹ್ಮದ್ ರಿಜ್ವಾನ್ ಅವರನ್ನು ಪೆವಿಲಿಯನ್ಗೆ ಅಟ್ಟಿದರು. 16ನೇ ಓವರ್ ನಲ್ಲಿ ಅಕ್ಷರ್ ಪಟೇಲ್ ಕೇವಲ 2 ರನ್ ನೀಡಿದರು ಹಾಗೂ 17ನೇ ಓವರ್ ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಶಾರ್ಟ್ ಬಾಲ್ ಬಲೆಗೆ ಶಾದಾಬ್ ಖಾನ್ ಬಲಿ ಬೀಳುವ ಮೂಲಕ ಭಾರತ ಬಿಗಿ ಹಿಡಿತ ಸಾಧಿಸಿತು.
ಕೊನೆಯ ಎರಡು ಓವರ್ ಗಳಲ್ಲಿ ಪಾಕಿಸ್ತಾನ ಗೆಲುವಿಗೆ 21 ರನ್ ಗಳ ಅಗತ್ಯವಿತ್ತು. ಕೊನೆಯ ಎಸೆತದಲ್ಲಿ ಇಫ್ತಿಕಾರ್ ಅಹ್ಮದ್ ಔಟ್ ಆಗುವ ಮೂಲಕ ಭಾರತದ ಸಂಭ್ರಮ ಮುಗಿಲು ಮುಟ್ಟಿತು. ಅರ್ಷದೀಪ್ ಅವರ ಕೊನೆಯ ಓವರ್ ನಲ್ಲಿ 18 ರನ್ ಗಳ ಗುರಿ ಪಾಕಿಸ್ತಾನಕ್ಕೆ ಅಸಾಧ್ಯ ಗುರಿ ಎನಿಸಿತು.
ಇದಕ್ಕೂ ಮುನ್ನ 12ನೇ ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿದ್ದ ಭಾರತ ಕೂಡಾ ನಾಟಕೀಯ ಪತನ ಕಂಡಿತು. 31 ಎಸೆತಗಳಲ್ಲಿ 42 ರನ್ ಗಳಿಸಿದ್ದ ರಿಷಬ್ ಪಂತ್ ಬಳಿಕ ಎಲ್ಲ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಪರೇಡ್ ನಡೆಸಿದರು. ಕೇವಲ 30 ರನ್ ಅಂತರದಲ್ಲಿ ಭಾರತ ಏಳು ವಿಕೆಟ್ ಕಳೆದುಕೊಂಡಿತು. ಭಾರತದ ಪರ ಪಂತ್ ಹೊರತಾಗಿ ಅಕ್ಷರ್ ಪಟೇಲ್ (20) ಮತ್ತು ರೋಹಿತ್ ಶರ್ಮಾ (13) ಮಾತ್ರ ಎರಡಂಕಿ ಮೊತ್ತ ತಲುಪಿದರು.