ತಿರುವನಂತಪುರಂ: ಪೋಲೀಸ್ ಪಡೆಯ ವಿಶ್ವಾಸಾರ್ಹತೆಗೆ ಮಸಿ ಬಳಿಯುವ ಅಧಿಕಾರಿಗಳ ವಿಭಾಗ ಈಗಲೂ ಇದೆ ಎಂದು ಮುಖ್ಯಮಂತ್ರಿ ಹೇಳಿದರು.
ಉತ್ತಮ ಸಂಖ್ಯೆಯ ಅಧಿಕಾರಿಗಳು ತಮ್ಮ ವರ್ತನೆಯನ್ನು ಬದಲಾಯಿಸಿಕೊಂಡಿದ್ದಾರೆ. ಜನಪರವಾದ ಧೋರಣೆಗಳನ್ನೂ ಅಳವಡಿಸಿಕೊಳ್ಳುತ್ತಾರೆ. ಬದಲಾವಣೆಗೆ ಒಳಪಡದವರನ್ನು ಗುರುತಿಸಿ ಹಂತಹಂತವಾಗಿ ಹೊರಹಾಕಲಾಗುತ್ತದೆ. ಕಳೆದ ಎಂಟು ವರ್ಷಗಳಲ್ಲಿ 108 ಅಧಿಕಾರಿಗಳನ್ನು ವಜಾ ಮಾಡಲಾಗಿದೆ ಎಂದರು.
ನ್ಯಾಯ ಕೊಡಬೇಕಾದವರು ಅಪರಾಧಿಗಳಾದಾಗ ವಿಶ್ವಾಸಾರ್ಹತೆ ಹಾಳಾಗುತ್ತದೆ. ಪೋಲೀಸ್ ಅಧಿಕಾರಿಗಳು ಯಾರೊಂದಿಗೆ ಸ್ನೇಹ ಬೆಳೆಸುತ್ತಾರೆ ಎಂಬುದು ಸಹ ಮುಖ್ಯವಾಗಿದೆ. ಪಾರ್ಟಿಗಳಿಗೆ ಹೋಗುವಾಗ ಮತ್ತು ಅವರೊಂದಿಗೆ ಪೋಟೋ ತೆಗೆಸಿಕೊಳ್ಳುವ ಬಗ್ಗೆ ಎಚ್ಚರದಿಂದಿರಬೇಕು. ಕೆಲವರು ಪೋಲೀಸರನ್ನು ದುರ್ಬಳಕೆ ಮಾಡಲು ಪ್ರಯತ್ನಿಸುತ್ತಾರೆ. ಮತ್ತೆ ಕೆಲವರು ಸಂಬಳ ಪಡೆಯಲಿರುವ ವೃತ್ತಿಯಾಗಿ ಮಾತ್ರÀ ನೋಡುತ್ತಾರೆ ಎಂದು ಮುಖ್ಯಮಂತ್ರಿ ಹೇಳಿದರು. ವಿಧಾನಸಭೆಯಲ್ಲಿ ಹಣದ ಮನವಿ ಮೇಲಿನ ಚರ್ಚೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಈ ವಿಷಯ ತಿಳಿಸಿದರು. ತಿರುವಂಜೂರು ರಾಧಾಕೃಷ್ಣನ್ ಮತ್ತಿತರರು ಪೋಲೀಸರ ಕುಕೃತ್ಯವನ್ನು ಎತ್ತಿ ತೋರಿಸಿದರು.