ಕಾಸರಗೋಡು : ನಗರದ ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಶ್ರೀ ವೆಂಕಟ್ರಮಣ ಬಾಲಗೋಕುಲದ "ಕುಟುಂಬ ಸಂಗಮ" ಕಾರ್ಯಕ್ರಮ ಜರುಗಿತು. ಬಾಲಗೋಕುಲ ಪ್ರಮುಖ್ ಶ್ರೀ ದೇವದಾಸ್ ನುಳ್ಳಿಪ್ಪಾಡಿ ಧ್ವಜಾರೋಹಣ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಕ್ಕಳಿಗೆ ಹಾಗೂ ತಾಯಂದಿರಿಗೆ ಭಾರತೀಯ ಸಂಸ್ಕøತಿ, ಕುಟುಂಬ ಪದ್ಧತಿಯ ಬಗ್ಗೆ ಮಾಹಿತಿ ನಿಡಲಾಯಿತು. ಬಾಲಗೋಕುಲದ ಮಕ್ಕಳು ತಮ್ಮ ತಾಯಂದಿರಿಗೆ "ಮಾತೃ ಪೂಜನಾ" ವಿಶೇಷ ಕಾರ್ಯಕ್ರಮ ನೆರವೇರಿಸಿದರು. ತಾಯಂದಿರ ಪಾದಕ್ಕೆ ಪುಷ್ಪಾರ್ಚನೆಯೊಂದಿಗೆ ಪೂಜೆ ನಡೆಸಿ ನಮಿಸಿದರು. ದೇವದಾಸ್ ನುಳ್ಳಿಪ್ಪಾಡಿ ಇವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.