HEALTH TIPS

ನಡುದಾರಿಯಲ್ಲಿ ಚಟ್ಟ ಬಿಟ್ಟು ಓಡಿದರು..ಏನಾಯ್ತು? ವೀಡಿಯೋ ವೈರಲ್​

          ಹೈದರಾಬಾದ್​: ಮನುಷ್ಯನಿಗೆ ಸಾವು ಅನಿವಾರ್ಯ. ಆದರೆ ಕೆಲವರು ಸತ್ತವರಿಗೆ ಹೆದರುತ್ತಾರೆ. ಆದ್ದರಿಂದಲೇ ಶವಯಾತ್ರೆಯಲ್ಲಿ ಭಾಗವಹಿಸದೆ ದೂರ ಉಳಿಯುತ್ತಾರೆ. ಆದರೆ ಹಲವರು ಅದು ಪುಣ್ಯದ ಕೆಲಸವೆಂದು ಅಂತ್ಯಕ್ರಿಯೆಯ ವಿಧಿಗಳಲ್ಲಿ ಭಾಗವಹಿಸುತ್ತಾರೆ. ಅದೇ ರೀತಿ ಇಲ್ಲೊಬ್ಬ ಮುದುಕ ಮೃತಪಟ್ಟಿದ್ದು, ಸ್ಥಳೀಯರು, ಕುಟುಂಬಸ್ಥರು ಕಣ್ಣೀರಿನ ನಡುವೆಯೇ ಶವಯಾತ್ರೆ ಸಾಗುತ್ತಿತ್ತು.

           ಆದರೆ ಅನಿರೀಕ್ಷಿತ ಘಟನೆ ನಡೆದು ಜನ ಚಟ್ಟ ಬಿಟ್ಟು ಓಡಿಹೋಗಿದ್ದಾರೆ. ಏನಾಯಿತು? ಈಗ ಅದು ಎಲ್ಲಿ ನಡೆದಿದೆ ಎಂದು ತಿಳಿಯೋಣ..

          ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಕೊತಗುಡ ಮಂಡಲದ ಎಂಚಗುಡದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಆ ಗ್ರಾಮದ ರುದ್ರಾಪು ವೀರಸ್ವಾಮಿ (70) ಎಂಬ ವೃದ್ಧ ಅನಾರೋಗ್ಯದಿಂದ ಜೂನ್ 11ರಂದು ನಿಧನರಾದರು.

             ಕುಟುಂಬಸ್ಥರು ಕಣ್ಣೀರಿಟ್ಟರು. ಬಂಧು ಮಿತ್ರರು ಎಲ್ಲರೂ ವೀರಾಸ್ವಾಮಿಯನ್ನು ನೋಡಲು ಬಂದಿದ್ದರು. ಅಂತೆಯೇ ಅವರ ಅಂತಿಮ ಸಂಸ್ಕಾರಕ್ಕೆ ಕುಟುಂಬಸ್ಥರು ವ್ಯವಸ್ಥೆ ಮಾಡಿದ್ದರು. ಶವಯಾತ್ರೆ ಅಲಂಕೃತ ಚಟ್ಟದಲ್ಲಿ ಸಾಗಿತು. ಮಾರ್ಗಮಧ್ಯದಲ್ಲಿ ಪಟಾಕಿ ಸಿಡಿಸಿದರು. ಇದರಿಂದಾಗಿ ಹತ್ತಿರದ ಮರಗಳ ಕೊಂಬೆಗಳಲ್ಲಿದ್ದ ಹೆಜ್ಜೇನು ಜನರ ಮೇಲೆ ಏಕಾಏಕಿ ದಾಳಿ ನಡೆಸಿವೆ. ಈ ಹಠಾತ್ ಘಟನೆಯಿಂದ ಎಲ್ಲರೂ ಎದ್ದೆನೋ ಬಿದ್ದೆನೋ ಎಂದು ಓಡಿ ಹೋಗಿದ್ದಾರೆ.

          ಇನ್ನು ಚಟ್ಟ ಹೊತ್ತಿದ್ದವರು ಮೃತದೇಹವನ್ನು ರಸ್ತೆಯಲ್ಲೇ ಬಿಟ್ಟು ಓಡಿ ಹೋಗಿದ್ದಾರೆ. ಜೇನುನೊಣಗಳು ಕೆಲವರನ್ನು ಅಟ್ಟಿಸಿಕೊಂಡು ಹೋಗಿ ದಾಳಿ ನಡೆಸಿವೆ. ಗಾಯಗೊಂಡವರನ್ನು ನರಸಂಪೇಟೆಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಹಲವಾರು ಗಂಟೆಗಳ ನಂತರ ಜೇನುನೊಣಗಳು ಹೊರಟುಹೋದವು ಮತ್ತು ಕೆಲವು ಸಂಬಂಧಿಕರು ಹಿಂತಿರುಗಿ ಅಂತಿಮ ವಿಧಿಗಳನ್ನು ಪೂರ್ಣಗೊಳಿಸಿದ್ದಾರೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries