ಕಾಸರಗೋಡು :ಕಾಸರಗೋಡು ಬಿಇಎಂ ಹೈಯರ್‍ಸೆಕೆಂಡರಿ ಶಾಲೆಯಲ್ಲಿ ಮಾದಕ ದ್ರವ್ಯ ವಿರುದ್ಧ ದಿನವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಶಾಲಾ ಎನ್‍ಸಿಸಿ ಹಾಗೂ ಕೈಟ್ ವಿದ್ಯಾರ್ಥಿಗಳನ್ನೊಳಗೊಂಡ ತಂಡ ನಗರದ ಪೆÇಲೀಸ್ ಠಾಣೆಗೆ ಭೇಟಿ ನೀಡಿದರು. ಠಾಣಾಧಿಕಾರಿ ಶಾಜು, ಸೀನಿಯರ್ ಸಿವಿಲ್ ಪೆÇಲೀಸ್ ಸೋನಿಯಾ ಚಂದ್ರನ್, ಅಸಿಸ್ಟೆಂಟ್ ಸಬ್ ಇನ್ಸ್‍ಪೆಕ್ಟರ್ ರಮೇಶ್ ಮಾದಕವಸ್ತುಗಳ ಬಗ್ಗೆ ತರಗತಿ ನಡೆಸಿಕೊಟ್ಟರು. ಪ್ರಾಂಶುಪಾಲ ರಾಜೇಶ್ ಚಂದ್ರ, ಸಾರ್ವಜನಿಕ ಸಂರಕ್ಷಣಾ ಯೋಜನೆ ಅಧ್ಯಕ್ಷ ಕೆ.ಎನ್ ವೆಂಕಟರಮಣ ಹೊಳ್ಳ ಹಾಗೂ ಎನ್‍ಸಿಸಿ ನಿರ್ವಾಹಕ ಮುರಳಿ ಮಾಧವ ಭಟ್ಟ ಉಪಸ್ಥಿತರಿದ್ದರು.