ಕುಂಬಳೆ: ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯು ಆಯೋಜಿಸಿದ ರಾಜ್ಯಮಟ್ಟದ ವಿದ್ಯಾರ್ಥಿ ಕಥಾಸ್ಪರ್ಧೆಯಲ್ಲಿ ಕುಮಾರಿ ಸುಪ್ರಿಯಾ ನಾಯಕ ತುಮಕೂರು ಪ್ರಥಮ, ಕುಮಾರಿ ಪ್ರತಿಭಾ ಹೆಗಡೆ ಶಿರಸಿ ದ್ವಿತೀಯ, ಕುಮಾರಿ ದೇವಿಕಾ ಪಿ. ಕಾಸರಗೋಡು ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಸ್ಪರ್ಧೆಗೆ ಸುಮಾರು ಐವತ್ತಕ್ಕೂ ಹೆಚ್ಚು ಕತೆಗಳು ಬಂದಿದ್ದವು. ಸಮಕಾಲೀನ ವಸ್ತುಸ್ಥಿತಿಯನ್ನು ಆಯ್ದು ಬರೆದ ಕತೆಗಳು ತಮ್ಮ ಮಂಡನೆ, ಧಾಟಿ ಮತ್ತು ರಚನಾ ವಿನ್ಯಾಸಗಳಿಂದ ಗಮನ ಸೆಳೆಯುತ್ತವೆ. ಉತ್ತಮ ಭಾμÁ ಪ್ರೌಢಿಮೆಯನ್ನು ಮೆರೆದ ಕತೆಗಾರರಿಗೆ ಒಳ್ಳೆಯ ಭವಿಷ್ಯವಿದೆ ಎಂದು ತೀರ್ಪುಗಾರರಾದ ಪ್ರಶಾಂತ್ ಮಾಡಳ್ಳಿ ಅಭಿಪ್ರಾಯ ಪಟ್ಟಿದ್ದಾರೆ. ಸಾಹಿತ್ಯ ಗಂಗಾ ಸಂಸ್ಥೆಯ ಮುಖ್ಯಸ್ಥ ವಿಕಾಸ ಹೊಸಮನಿ ಮತ್ತು ಸಂಚಾಲಕ ಡಾ. ಸುಭಾμï ಪಟ್ಟಾಜೆಯವರು ಬಹುಮಾನಿತರಾದ ಮತ್ತು ಭಾಗವಹಿಸಿದ ಸ್ಪರ್ಧಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.