ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಎಂಡೋಸಲ್ಫಾನ್ ಪೀಡಿತ ಮಕ್ಕಳ ಸಾಂತ್ವನ ಬಡ್ಸ್ ಶಾಲೆಗೆ ತಮರ್ ಅಬ್ದುಲ್ಲ ಸ್ಮಾರಕ ಪೌಂಡೇಶನ್ ವತಿಯಿಂದ ಉಚಿತ ಸಮವಸ್ತ್ರ, ಆಟದ ಸಾಮಾಗ್ರಿ ಕಿಟ್ ವಿತರಿಸಲಾಯಿತು.
ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದೀನರ ಬದುಕಿಗೆ ಸಾಂತ್ವನದ ಸ್ಪರ್ಶ ನೀಡುವ ಮೂಲಕ ಸಂಘಟನೆ ಮಕ್ಕಳಿಗೆ ಉಪಕಾರಿಯಾಗುವ ಇಂತಹ ಮಹತ್ಕಾರ್ಯದಲ್ಲಿ ತೊಡಗಿಕೊಂಡಿರುವುದು ನಾಡಿಗೆ ಮಾದರಿ ಎಂದರು.
ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಸಭೆಯ ಅಧ್ಯಕ್ಷತೆವಹಿಸಿದ್ದರು. ತಮರ್ ಅಬ್ದುಲ್ಲ ಸ್ಮಾರಕ ಪೌಂಡೇಶನ್ ನ ಅಧ್ಯಕ್ಷ, ಉದ್ಯಮಿ ಇಬ್ರಾಹಿಂ ಮುಂಡಿತ್ತಡ್ಕ ಮುಖ್ಯ ಭಾಷಣಗೈದರು. ಜಿಲ್ಲಾ ಪಂ.ಸದಸ್ಯ ನಾರಾಯಣ ನಾಯ್ಕ್, ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಭಿ ಹನೀಫ್, ಪಂ.ಸದಸ್ಯ ನರಸಿಂಹ ಪೂಜಾರಿ, ರಾಮಚಂದ್ರ ಎಂ, ಉಷಾ ಕುಮಾರಿ, ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ, ಮಾಜಿ ಉಪಾಧ್ಯಕ್ಷೆ ಆಯಿಷಾ ಎ.ಎ, ಮುಸ್ಲಿಂಲೀಗ್ ನೇತಾರ ಶೇರಿಫ್ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು. ಬಡ್ಸ್ ಶಾಲಾ ಪ್ರಾಂಶುಪಾಲೆ ಮರಿಯಾಂಬಿ ಸ್ವಾಗತಿಸಿ, ಅಲ್ಬರ್ಟ್ ಫೀಲಿಪ್ ವಂದಿಸಿದರು. ಪೌಂಡೇಶನ್ ವತಿಯಿಂದ ಮಕ್ಕಳಿಗೆ ಮಧ್ಯಾಹ್ನದ ಸಹಭೋಜನ ಏರ್ಪಡಿಸಲಾಗಿತ್ತು.