HEALTH TIPS

ಹಜ್‌ ಯಾತ್ರೆ: ಮೆಕ್ಕಾದಲ್ಲಿ ಹೆಚ್ಚಿದ ವಿದೇಶಿಯರ ಸಂಖ್ಯೆ

            ಮೆಕ್ಕಾ: ಜೂನ್‌ 14ರಿಂದ ಹಜ್‌ಯಾತ್ರೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಮುಸ್ಲಿಮರ ಪವಿತ್ರ ಸ್ಥಳವಾದ ಮೆಕ್ಕಾಕ್ಕೆ ಭೇಟಿ ನೀಡುವ ವಿದೇಶಿಯರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ.

           ಮಂಗಳವಾರದ ವೇಳೆಗೆ ಸುಮಾರು 15 ಲಕ್ಷಕ್ಕೂ ಹೆಚ್ಚು ವಿದೇಶಿ ಯಾತ್ರಾರ್ಥಿಗಳು ಬಂದಿರುವುದಾಗಿ ಸೌದಿ ಅರೇಬಿಯಾದ ಅಧಿಕಾರಿಗಳು ತಿಳಿಸಿದ್ದಾರೆ.

            ಈ ವರ್ಷ 18 ಲಕ್ಷಕ್ಕೂ ಹೆಚ್ಚು ಜನರು ಹಜ್‌ ಯಾತ್ರೆಗಾಗಿ ಮೆಕ್ಕಾಕ್ಕೆ ಭೇಟಿ ನೀಡುವ ನಿರೀಕ್ಷೆ ಇದ್ದು, ಈ ವರ್ಷ ಯಾತ್ರಾರ್ಥಿಗಳ ಸಂಖ್ಯೆಯು 2023ಕ್ಕಿಂತ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಸೌದಿ ಅಧಿಕಾರಿಗಳು ಹೇಳಿದ್ದಾರೆ.

           ಈ ತಿಂಗಳ ಆರಂಭದಲ್ಲಿ 4,200 ಪ್ಯಾಲೆಸ್ಟೀನಿಯನ್ನರು ಮೆಕ್ಕಾಕ್ಕೆ ಬಂದಿರುವುದಾಗಿ ಪ್ಯಾಲೇಸ್ಟಿನಿಯನ್ ಅವ್ಕಾಫ್ ಮತ್ತು ಧಾರ್ಮಿಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ. 2019ರಲ್ಲಿ, 24 ಲಕ್ಷಕ್ಕೂ ಹೆಚ್ಚು ಮುಸ್ಲಿಮರು ಮೆಕ್ಕಾಕ್ಕೆ ಭೇಟಿ ನೀಡಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries