ಹಲಸಿನ ಹಣ್ಣು ಇದೊಂದು ಆರೋಗ್ಯಕಾರಿ ಹಣ್ಣು ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಅನೇಕ ಮಂದಿ ಈ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ, ಇದು ದೇಹಕ್ಕೆ ತುಂಬಾ ಉಪಯುಕ್ತವಾಗಿದೆ
ಆದರೆ ಕೆಲ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಮಾತ್ರ ಹಲಸಿನ ಹಣ್ಣಿನ ಸೇವನೆಯಿಂದ ದೂರವಿರುವುದು ಉತ್ತಮ.
ಹಲಸಿನ ಹಣ್ಣಿನಲ್ಲಿ ಹೆಚ್ಚಿನ ನೀರಿನ ಅಂಶ ಮತ್ತು ಫೈಬರ್ ಅಂಶ ಇರುತ್ತದೆ. ಅಲ್ಲದೇ ಹಲಸಿನ ಹಣ್ಣನ್ನು ಯಾರು ಬೇಕಾದರೂ ತಿನ್ನಬಹುದು. ಹಲಸಿನ ಹಣ್ಣಿನ ಪ್ರತಿಯೊಂದು ಭಾಗವೂ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಹಲಸಿನ ತೊಲೆ, ಹಲಸಿನ ಬೀಜ ಮತ್ತು ಹಣ್ಣು ಎಲ್ಲವನ್ನು ಕೂಡ ತಿನ್ನಬಹುದು.
ವಿಶೇಷವಾಗಿ ಹಲಸಿನ ಹಣ್ಣನ್ನು ತಿನ್ನುವುದರಿಂದ ಪುರುಷರಿಗೆ ಸಾಕಷ್ಟು ಪ್ರಯೋಜನಕಾರಿ ಆಗಿದೆ. ಇದರ ಅನೇಕ ಪೌಷ್ಟಿಕಾಂಶಗಳು ನಮಗೆ ಸೌಂದರ್ಯ ಮತ್ತು ಆರೋಗ್ಯವನ್ನು ಒದಗಿಸುತ್ತವೆ. ಇದಲ್ಲದೇ, ಹಲಸು ಪುರುಷರಲ್ಲಿ ವೀರ್ಯ ಬೆಳವಣಿಗೆಯನ್ನು ಹೆಚ್ಚಿಸುತ್ತಾರೆ ಮತ್ತು ಅವರನ್ನು ಫಲವತ್ತಾಗಿಸುತ್ತದೆ.
ಅಲ್ಲದೇ, ಚರ್ಮ ಮತ್ತು ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವ ಪುರುಷರು, ಹಲಸಿನ ಹಣ್ಣನ್ನು ತಿನ್ನುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಹಲಸಿನ ಹಣ್ಣು ತಿಂದರೆ ರಿಕೆಟ್ ಸಮಸ್ಯೆಯೂ ನಿಯಂತ್ರಣಕ್ಕೆ ಬರುತ್ತದೆ. ಜೊತೆಗೆ ರಕ್ತಹೀನತೆಯ ಸಮಸ್ಯೆಯೂ ನಿಯಂತ್ರಣಕ್ಕೆ ಬರುತ್ತದೆ.
ಆದರೆ ಕೆಲವರು ಮಾತ್ರ ಹಲಸಿನ ಹಣ್ಣನ್ನು ತಿನ್ನಲು ಇಷ್ಟಪಡುವುದಿಲ್ಲ. ಏಕೆಂದರೆ ಅಂತಹವರು ಹಲಸನ್ನು ತಿಂದರೆ ಆರೋಗ್ಯದಲ್ಲಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವವರು ಹಲಸಿನ ಹಣ್ಣಿನಿಂದ ದೂರವಿರುವುದು ಉತ್ತಮ
ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ಹಲಸಿನ ಹಣ್ಣನ್ನು ಸೇವಿಸದೇ ಇರುವುದು ಉತ್ತಮ. ಇವುಗಳನ್ನು ತಿಂದರೆ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುವ ಅಪಾಯವಿದೆ. ಹಾಗಾಗಿ ಮಧುಮೇಹದಿಂದ ಬಳಲುತ್ತಿರುವವರು ಹೆಚ್ಚಿನ ಪ್ರಮಾಣದಲ್ಲಿ ಹಲಸಿನ ಹಣ್ಣನ್ನು ತಿನ್ನಬಾರದು
ಗರ್ಭಿಣಿಯರು ಹಲಸಿನ ಹಣ್ಣನ್ನು ತಿನ್ನುವಾಗಲೂ ಎಚ್ಚರಿಕೆ ವಹಿಸಬೇಕು. ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದ ಸಕ್ಕರೆಯಿಂದ ಬಳಲುತ್ತಿರುವ ಮಹಿಳೆಯರು ಇದನ್ನು ತಪ್ಪಿಸಬೇಕು. ಗರ್ಭಿಣಿ ಮಹಿಳೆಯರು ಹಲಸು ತಿನ್ನಬೇಕೆಂದು ಅನಿಸಿದರೆ ಮೊದಲು ವೈದ್ಯರ ಸಲಹೆಯನ್ನು ಪಡೆಯಬೇಕು
ಹಲಸು ರಕ್ತ ಹೆಪ್ಪುಗಟ್ಟುವಿಕೆಯನ್ನು ವೇಗಗೊಳಿಸುತ್ತದೆ, ರಕ್ತ ಸಂಬಂಧಿತ ಕಾಯಿಲೆಗಳಿರುವವರು ಹಲಸಿನ ಹಣ್ಣನ್ನು ಸೇವಿಸುವುದನ್ನು ತಪ್ಪಿಸಬೇಕು. ನಂಜು, ಹೊಟ್ಟೆನೋವು, ಅಗ್ನಿ, ಕ್ಷಯ, ಶುಕ್ರನಷ್ಟ, ಅಂಡಾಶಯ ಇತ್ಯಾದಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಹಲಸಿನ ಹಣ್ಣನ್ನು ತಿನ್ನಬಾರದು. ಅಧಿಕ ತೂಕ ಮತ್ತು ಅಲರ್ಜಿ ಇರುವವರು ಕೂಡ ಈ ಹಣ್ಣನ್ನು ಸೇವಿಸಬಾರದು.