ಕಾಸರಗೋಡು: ವಿಶ್ವ ತಂಬಾಕು ರಹಿತ ದಿನಾಚರಣೆಯ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ. ಎ. ವಿ. ರಾಮದಾಸ್ ನಿನ್ನೆ ನಿರ್ವಹಿಸಿದರು. ವೆಳ್ಳರಿಕುಂಡ್ ಬ್ಲಾಕ್ ಕುಟುಂಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಿನಿಲ್ ವಿ. ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್, ಉಪ ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಸಯನಾ ಎಸ್, ವೆಳ್ಳರಿಕುಂಡ್ ಬ್ಲಾಕ್ ಕುಟುಂಬ ಆರೋಗ್ಯ ಕೇಂದ್ರದ ಡಾ. ಕೆರ್ಲಿನ್ ಪಿ. ಜೆರೋಮ್, ಡಾ. ಟಿಜೋ ಪಿ.ಜಾಯ್, ಸಾರ್ವಜನಿಕ ಆರೋಗ್ಯ ಶುಶ್ರೂಷಕಿ ಎಲಿಯಮ್ಮ ವರ್ಗೀಸ್, ಆರೋಗ್ಯ ನಿರೀಕ್ಷಕ ಸಾಜು ಸೆಬಾಸ್ಟಿಯನ್ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಜೂನಿಯರ್ ಕನ್ಸಲ್ಟೆಂಟ್ ಕಮಲ್ ಕೆ.ಜೋಸ್ ಮಾತನಾಡಿದರು. ಸೇಂಟ್ ಜೂಡ್ ಸ್ಕೂಲ್ ಎನ್. ಸಿಸಿ, ಎಸ್. ಪಿ.ಸಿ. ವಿದ್ಯಾರ್ಥಿಗಳು, ಕುಟುಂಬಶ್ರೀ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಜಾಗೃತಿ ವಿಚಾರ ಸಂಕಿರಣದಲ್ಲಿ ವೆಳ್ಳರಿಕುಂಡ್ ಬ್ಲಾಕ್ ಕುಟುಂಬಶ್ರೀ ಕೇಂದ್ರದ ವೈದ್ಯಾಧಿಕಾರಿ ಡಾ.ಶಿನಿಲ್ ತರಗತಿ ತೆಗೆದುಕೊಂಡರು. ಕಾರ್ಯಕ್ರಮದ ಅಂಗವಾಗಿ ವೆಳ್ಳರಿಕುಂಡ್ ಬ್ಲಾಕ್ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಆರಂಭವಾದ ತಂಬಾಕು ನಿವಾರಣಾ ಕ್ಲಿನಿಕ್ ಉದ್ಘಾಟನೆಯನ್ನು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ. ರಾಮದಾಸ್ ಎ.ವಿ. ನಿರ್ವಹಿಸಿದರು.
ತಂಬಾಕು ನಿಲುಗಡೆ ಕ್ಲಿನಿಕ್:
ತಂಬಾಕು ನಿಲುಗಡೆ ಕ್ಲಿನಿಕ್ ತಂಬಾಕು ಸೇವನೆಯನ್ನು ನಿಲ್ಲಿಸಲು ಬಯಸುವವರಿಗೆ ಸಮಾಲೋಚನೆ ಮತ್ತು ಚಿಕಿತ್ಸೆಯನ್ನು ಒದಗಿಸುವ ಕೇಂದ್ರವಾಗಿದೆ. ತಂಬಾಕು ಸೇವನೆಯನ್ನು ನಿಲ್ಲಿಸಲು ಬಯಸುವ ವ್ಯಕ್ತಿಗಳು ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸುವ ಮೂಲಕ ತಂಬಾಕು ನಿಯಂತ್ರಣ ಕಾರ್ಯಕ್ರಮದೊಂದಿಗೆ ನೋಂದಾಯಿಸಿಕೊಳ್ಳಬಹುದು. ಅಂತಹ ನೋಂದಣಿದಾರರಿಗೆ ಅವರ ವಾಸಸ್ಥಳದ ಸಮೀಪವಿರುವ ಕುಟುಂಬ ಆರೋಗ್ಯ ಕೇಂದ್ರಗಳ ಮೂಲಕ ಸಮಾಲೋಚನೆ, ಚಿಕಿತ್ಸೆಯ ನಂತರ ಅಗತ್ಯವಿದ್ದರೆ ತಜ್ಞ ವೈದ್ಯರ ಸೇವೆಗಳು ಮತ್ತು ತಂಬಾಕು ಸೇವನೆಯಿಂದ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಚಿಕಿತ್ಸಾ ಸೌಲಭ್ಯಗಳು ಲಭ್ಯವಿರುತ್ತವೆ.
ಪ್ರತಿ ವರ್ಷ ಮೇ 31 ಅನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷದ ವಿಶ್ವ ತಂಬಾಕು ರಹಿತ ದಿನದ ಥೀಮ್ 'ತಂಬಾಕು ಕಂಪನಿಗಳ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು'. ಈ ಸಂದೇಶವನ್ನು ಆಧರಿಸಿ ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಎ. ವಿ. ರಾಮದಾಸ್ ಮಾಹಿತಿ ನೀಡಿದರು.