ನವದೆಹಲಿ: ದೆಹಲಿ ಶಾಸಕ ಸ್ಥಾನದಿಂದ ರಾಜ್‌ಕುಮಾರ್ ಆನಂದ್ ಅವರನ್ನು ಅನರ್ಹಗೊಳಿಸಿ ವಿಧಾನಸಭೆಯ ಅಧ್ಯಕ್ಷರಾದ ರಾಮ್ ನಿವಾಸ್ ಗೋಯಲ್ ಆದೇಶಿಸಿದ್ದಾರೆ.
ನವದೆಹಲಿ: ದೆಹಲಿ ಶಾಸಕ ಸ್ಥಾನದಿಂದ ರಾಜ್‌ಕುಮಾರ್ ಆನಂದ್ ಅವರನ್ನು ಅನರ್ಹಗೊಳಿಸಿ ವಿಧಾನಸಭೆಯ ಅಧ್ಯಕ್ಷರಾದ ರಾಮ್ ನಿವಾಸ್ ಗೋಯಲ್ ಆದೇಶಿಸಿದ್ದಾರೆ.
ಎಎಪಿ ಸರ್ಕಾರದಲ್ಲಿ ಸಾಮಾಜಿಕ ಕಲ್ಯಾಣ ಸಚಿವರಾಗಿದ್ದ ರಾಜ್, ಬಹುಜಜನ ಸಮಾಜ ಪಕ್ಷಕ್ಕೆ(ಬಿಎಸ್‌ಪಿ) ಸೇರಲು ಸಚಿವ ಸ್ಥಾನ ಮತ್ತು ಎಎಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
'ಈ ಸಂಬಂಧ ನೀಡಲಾಗಿದ್ದ ನೋಟಿಸ್‌ಗೆ ಜೂನ್ 10ರ ಒಳಗೆ ಉತ್ತರಿಸುವಂತೆ ಸೂಚಿಸಲಾಗಿತ್ತು. ಆದರೆ, ಅವರು ಯಾವುದೇ ಉತ್ತರ ನೀಡಿರಲಿಲ್ಲ. ಜೂನ್ 11ರಂದು ಖುದ್ದು ಹಾಜರಾತಿಗೂ ಸೂಚಿಸಲಾಗಿತ್ತು. ಅಂದೂ ಹಾಜರಾಗದ ಕಾರಣ ಜೂನ್ 14ಕ್ಕೆ ಹಾಜರಾಗುವಂತೆ ಸೂಚಿಸಿ ಮತ್ತೊಂದು ಅವಕಾಶ ನೀಡಲಾಗಿತ್ತು. ಇಂದು ಸಹ ರಾಜ್ ಹಾಜರಾಗದ ಹಿನ್ನೆಲೆಯಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ'ಎಂದು ಗೋಯಲ್ ತಿಳಿಸಿದ್ದಾರೆ.
2020ರ ವಿಧಾನಸಭೆ ಚುನಾವಣೆಯಲ್ಲಿ ದೆಹಲಿಯ ಪಟೇಲ್ ನಗರ ಮೀಸಲು ಕ್ಷೇತ್ರದಿಂದ ಜಯ ಗಳಿಸಿದ್ದ ಅವರು, ಭ್ರಷ್ಟಾಚಾರ ಮತ್ತು ದಲಿತ ನಾಯಕರ ನಿರ್ಲಕ್ಷ್ಯದ ಆರೋಪ ಮಾಡಿ ಪಕ್ಷದಿಂದ ಹೊರ ನಡೆದಿದ್ದರು.