ಕಾಸರಗೋಡು : ಲೋಕಸಭಾ ಚುನಾವಣೆಯ ಮತ ಎಣಿಕೆ ಪೆರಿಯದ ಕೇಂದ್ರ ವಿಶ್ವವಿದ್ಯಾನಿಲಯದಲ್ಲಿ ಬೆಳಗ್ಗೆ ಆರಂಭಗೊಂಡಿದ್ದು, ಹಾಲಿ ಸಂಸದ, ಯುಡಿಎಫ್ ಅಭ್ಯರ್ಥಿ ಮಧ್ಯಾಹ್ನ 1.10ರ ವರದಿಯ ಅನುಸಾರ 199997 ಮತಗಳ ಅಂತರದಲ್ಲಿ ಮುನ್ನಡೆಯಲಿದ್ದಾರೆ. ಏ. 26ರಂದು ನಡೆದ ಚುನಾವಣೆಯಲ್ಲಿ 76.04 ಶೇಕಡಾ ಮತದಾನವಾಗಿತ್ತು.
ಎಲ್.ಡಿ.ಎಫ್ ಅಭ್ಯರ್ಥಿ ಎಂ.ವಿ ಬಾಲಕೃಷ್ನನ್ 164717 ಮತಗಳಿಂದ ಎರಡನೇ ಸ್ಥಾನ ಹಾಗೂ ಎನ್ ಡಿ ಎ ಅಭ್ಯರ್ಥಿ ಎಂ.ಎಲ್ ಅಶ್ವಿನಿ 100289 ಮತಗಳಿಂದ ಮೂರನೇ ಸ್ಥಾನದಲ್ಲಿದ್ದಾರೆ.
9 ಮಂದಿ ಕಣದಲ್ಲಿದ್ದು, ಕಾಂಗ್ರೆಸ್ ನಿಂದ ರಾಜ್ ಮೋಹನ್ ಉಣ್ಣಿತ್ತಾನ್, ಸಿಪಿಐಎಂ ನಿಂದ ಎಂ.ವಿ ಬಾಲಕೃಷ್ಣನ್ ಮತ್ತು ಬಿಜೆಪಿಯಿಂದ ಎಂ.ಎಲ್. ಅಶ್ವಿನಿ ನಡುವೆ ತಿಕೋನ ಸ್ಪರ್ಧೆ ನಡೆಯುತ್ತಿದೆ.