ಬದಿಯಡ್ಕ: ರಂಗಸಿರಿ ಸಾಂಸ್ಕøತಿಕ ವೇದಿಕೆ(ರಿ)ಬದಿಯಡ್ಕ ಇದರ ವತಿಯಿಂದ ಯಕ್ಷಗಾನ ನಾಟ್ಯ, ಹಿಮ್ಮೇಳ ತರಗತಿಗಳು ಶನಿವಾರ ಮತ್ತು ಭಾನುವಾರಗಳಂದು ಬದಿಯಡ್ಕ ನವಜೀವನ ವಿದ್ಯಾಲಯದಲ್ಲಿ ನಡೆಯಲಿದೆ. ಯಾವುದೇ ವಯಸ್ಸಿನ ಮಿತಿಯಿಲ್ಲದೆ ಆಸಕ್ತರು ತರಗತಿಗಳಲ್ಲಿ ಪಾಲ್ಗೊಳ್ಳಬಹುದಾಗಿದೆ. ಯಕ್ಷಗಾನದ ಜೊತೆಗೆ ಯೋಗ, ವ್ಯಕ್ತಿತ್ವ ವಿಕಾಸ, ಕ್ರಾಫ್ಟ್ ಮುಂತಾದ ಕಾರ್ಯಾಗಾರಗಳು ಉಚಿತವಾಗಿ ಲಭಿಸಲಿದೆ. ತರಬೇತಿ ಬಳಿಕ ರಂಗಸಿರಿಯ ಪ್ರದರ್ಶನ ತಂಡದಲ್ಲಿ ಊರಪರವೂರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶವಿದೆ. ಜೂನ್ ದ್ವಿತೀಯ ವಾರದಲ್ಲಿ ನೂತನ ಬ್ಯಾಚ್ ಉದ್ಘಾಟನೆ ನಡೆಸಲು ಉದ್ದೇಶಿಸಲಾಗಿದ್ದು ತರಗತಿಗೆ ಸೇರಲಿಚ್ಛಿಸುವವರು ರಂಗಸಿರಿಯ 9633876833 ಶ್ರೀಶಕುಮಾರ ಪಂಜಿತ್ತಡ್ಕ ಇವರನ್ನು ಸಂಪರ್ಕಿಸಲು ವಿನಂತಿಸಲಾಗಿದೆ.