HEALTH TIPS

ಬದಿಯಡ್ಕದ ಪೊಲೀಸರಿಂದ ರಾಜ್ಯವೇ ತಲೆತಗ್ಗಿಸುವಂತಾಗಿದೆ - ಶ್ಯಾಮ್ ಮೋಹನ್: ಲವ್ ಜಿಹಾದಿಗೆ ಬೆಂಬಲ ನೀಡಿದ ಪೊಲೀಸ್ ಇಲಾಖೆಯ ವಿರುದ್ಧ ವಿಹಿಂಪ ಪ್ರತಿಭಟನೆ

           ಬದಿಯಡ್ಕ: ಕಾರ್ಯಕರ್ತರು ಇಂದು ಎದ್ದು ನಿಂತಿರುವುದು ಯಾವುದೇ ಧರ್ಮ, ಮತ, ಸಂಘಟನೆಗಾಗಿ ಅಲ್ಲ. ಸಾಮಾಜಿಕ ಕಳಿಕಳಿಯ ಬೇಡಿಕೆಯೊಂದಿಗೆ ಸಂಘಪರಿವಾರ ಇಂದು ಪ್ರತಿಭಟನೆಯಲ್ಲಿದೆ. ಪೊಲೀಸ್ ಇಲಾಖೆ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವುದು ಹಿಂದೂಸಮಾಜದ ಪ್ರತಿಭಟನೆಗೆ ಕಾರಣವಾಗಿದೆ. ಪೊಲೀಸ್ ಎಂದರೆ ಎಲ್ಲರಿಗೂ ಒಂದೇ ರೀತಿಯಲ್ಲಿರಬೇಕೇ ಹೊರತು ಇಲ್ಲಿ ಜಾತಿ ಮತ ರಾಜಕೀಯವನ್ನು ತೋರಿಸುವಂತಿಲ್ಲ. ಕೇರಳದಲ್ಲಿ ಅತ್ಯುತ್ತಮವಾದ ಪೊಲೀಸ್ ಇಲಾಖೆಯಿತ್ತು. ಆದರೆ ಇಂದು ಇಲ್ಲಿನ ಅಧಿಕಾರಿಗಳ ಕಾರ್ಯವು ಕೇರಳ ಪೊಲೀಸ್ ಇಲಾಖೆಯನ್ನೇ ತಲೆತಗ್ಗಿಸುವಂತೆ ಮಾಡಿದೆ ಎಂದು ಹಿಂದೂ ಐಕ್ಯವೇದಿ ಕೇರಳ ರಾಜ್ಯ ಕಾರ್ಯದರ್ಶಿ ಶ್ಯಾಮ್ ಮೋಹನ್ ಹೇಳಿದರು.


           ಲವ್‍ಜಿಹಾದಿಗೆ ಬೆಂಬಲ ನೀಡಿದ ಬದಿಯಡ್ಕ ಠಾಣೆಯ ಪೊಲೀಸ್ ಅಧಿಕಾರಿಗಳ ಹಿಂದೂ ವಿರೋಧಿ ನೀತಿ ಖಂಡಿಸಿ ವಿಶ್ವಹಿಂದೂ ಪರಿಷತ್ ಬದಿಯಡ್ಕ ಪ್ರಖಂಡದ ನೇತೃತ್ವದಲ್ಲಿ ಶನಿವಾರ ಬದಿಯಡ್ಕ ಪೊಲೀಸ್ ಠಾಣೆಗೆ ನಡೆದ ಪ್ರತಿಭಟನಾ ಮಾರ್ಚ್‍ನ್ನು ಉದ್ಘಾಟಿಸಿ ಅವರು ಮಾತನಾಡಿದರು.

              2047ರಲ್ಲಿ ಕೇರಳವನ್ನು ಮುಸ್ಲಿಂ ರಾಜ್ಯವನ್ನಾಗಿಸುವ ಹುನ್ನಾರಕ್ಕೆ ನೇತೃತ್ವವನ್ನು ನೀಡುತ್ತಿರುವ ಪೋಪುಲರ್ ಫ್ರಂಟ್, ಎಸ್.ಡಿ.ಪಿ.ಐ. ಮೊದಲಾದ ಮತೀಯ ಭಯೋತ್ಪಾದಕ ಸಂಘಟನೆಯು ಮತಾಂತರ ಪ್ರಕ್ರಿಯೆಯಲ್ಲಿ ತೊಡಗಿರುವುದು ನಾಡಿನಾದ್ಯಂತ ತಿಳಿದ ವಿಚಾರವಾಗಿದೆ. ಪೊಲೀಸ್ ಇಲಾಖೆ ಇಂತಹ ಘಟನೆಗಳು ನಡೆಯದಂತೆ ತಡೆಯುವ ಬದಲು ಅದಕ್ಕೆ ಬೆಂಬಲವಾಗಿ ನಿಂತಿದೆ. ಲವ್‍ಜಿಹಾದ್‍ನಂತಹ ಘಟನೆಗಳನ್ನು ತಡೆಯಬೇಕಾದ ಪೊಲೀಸ್ ಮತಾಂತರಕ್ಕೆ ಬೆಂಬಲವನ್ನು ನೀಡುತ್ತಿರುವುದು ಖಂಡನೀಯ. ಪೊಲೀಸ್ ತನ್ನ ಕರ್ತವ್ಯವನ್ನು ಮಾಡಬೇಕೇ ಹೊರತು ರಾಜಕೀಯವನ್ನು ಮಾಡುವಂತಿಲ್ಲ. ಸಂಘಟನೆಗಳ ಮುಖಂಡರಿಗೆ ಗೌರವವನ್ನು ನೀಡದ ಪೊಲೀಸಕಾರಿಯ ವಿರುದ್ಧ ಸೂಕ್ತ ತನಿಖೆಯಾಗಬೇಕು ಎಂದರು.


             ಬಿಜೆಪಿ ಕಾಸರಗೋಡು ಮಂಡಲಾಧ್ಯಕ್ಷ ಹರೀಶ್ ನಾರಂಪಾಡಿ ಅಧ್ಯಕ್ಷತೆ ವಹಿಸಿ ಓರ್ವ ಉದ್ಯೋಗಸ್ಥನ ವಿರುದ್ಧ ಇದೇ ಮೊದಲ ಬಾರಿಗೆ ಬದಿಯಡ್ಕದಲ್ಲಿ ಸಂಘಪರಿವಾರದ ನೇತೃತ್ವದಲ್ಲಿ ಒಂದು ಪ್ರತಿಭಟನೆ ನಡೆಯುತ್ತಿದೆ. ಕೆಲವೇ ದಿನಗಳ ಹಿಂದೆ ಇಲ್ಲಿ ಉದ್ಯೋಗವನ್ನು ಪಡೆದುಕೊಂಡ ಕೋಮು ಭಾವನೆಯ ಅಧಿಕಾರಿಯು ಹಿಂದೂ ಹುಡುಗಿಯ ಮತಾಂತರಕ್ಕೆ ಬೆಂಬಲವಾಗಿ ನಿಂತಿರುವುದು ಖಂಡನೀಯವಾಗಿದೆ. ಯುವತಿಯ ಹೆತ್ತವರೊಂದಿಗೂ ಸಂಪರ್ಕಕ್ಕೆ ಅವಕಾಶವನ್ನು ನೀಡದ ಇಂತಹ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಮತಾಂತರಕ್ಕೆ ಬೆಂಬಲವಾಗಿ ನಿಂತ ಮುಸ್ಲಿಂಲೀಗ್ ಹಾಗೂ ಎಸ್‍ಡಿಪಿಐ ಮುಖಂಡರ ವಿರುದ್ಧವೂ ತನಿಖೆಯಾಗಬೇಕು ಎಂದರು. ಬದಿಯಡ್ಕ ಗಣೇಶ ಮಂದಿರದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಪರಿವಾರ ಸಂಘಟನೆಗಳ ಪ್ರಮುಖರಾದ ಪವಿತ್ರನ್ ಕೆ.ಕೆ.ಪುರಂ, ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಸುರೇಶ್ ಶೆಟ್ಟಿ ಪರಂಕಿಲ, ಹರಿಪ್ರಸಾದ ರೈ, ಸುನಿಲ್ ಕಿನ್ನಿಮಾಣಿ, ಪ್ರದೀಪ್ ಎರಿಯಾಲ್, ಪಿ. ರಮೇಶ್ ಕಾಸರಗೋಡು, ಸುದಾಮ ಗೋಸಾಡ, ಅವಿನಾಶ್ ಬದಿಯಡ್ಕ, ಸಂತೋಷ್ ರೈ ಗಾಡಿಗುಡ್ಡೆ, ಶೈಲಜಾ ಭಟ್, ಶ್ರೀಧರ ಬೆಳ್ಳೂರು, ಎಂ. ಜನನಿ, ಮಣಿಕಂಠ ರೈ, ಗೋಪಾಲಕೃಷ್ಣ ಮುಂಡೋಳುಮೂಲೆ, ರವಿ ಬದಿಯಡ್ಕ, ಎಂ.ಕೆ.ರಾಘವ, ಲೀಲಾಕೃಷ್ಣ, ಸುಕುಮಾರ ಕುದ್ರೆಪ್ಪಾಡಿ, ವಿವಿಧಡೆಗಳಿಂದ ಕಾರ್ಯಕರ್ತರು ಪಾಲ್ಗೊಂಡಿದ್ದರು. ರಮೇಶ್ ಕೃಷ್ಣ ಪದ್ಮಾರು ಸ್ವಾಗತಿಸಿ ವಾಮನ ಆಚಾರ್ಯ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries