ಕಾಸರಗೋಡು: ಐಸಿಎಆರ್-ಸಿಪಿಸಿಆರ್‍ಐ ವತಿಯಿಂದ ವಿಶ್ವ ಪರಿಸರ ದಿನವನ್ನು ಸಿಪಿಸಿಆರ್‍ಐ ವಠಾರದಲ್ಲಿ ಬುಧವಾರ ಆಚರಿಸಲಾಯಿತು. ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕರಾವಳಿ ಪರಿಸರ ವ್ಯವಸ್ಥೆ, ನದಿ ಕಣಿವೆ, ಜೌಗು ಪ್ರದೇಶ, ಡೀಮ್ಡ್ ಅರಣ್ಯಗಳು ಮತ್ತು ತೋಟಗಳು ಸೇರಿದಂತೆ ಪಶ್ಚಿಮ ಘಟ್ಟಗಳ ಭಾಗವಾಗಿ ವಿವಿಧ ರೀತಿಯ ಪರಿಸರ ವ್ಯವಸ್ಥೆಗಳು ಮತ್ತು ಸಂಪ್ರದಾಯಗಳ ಕುರಿತು ಭಾಷಣ ಮಾಡಿದ ಅವರು ಜೀವವೈವಿಧ್ಯ ಸಂರಕ್ಷಣೆಯನ್ನು ಉತ್ತೇಜಿಸಿ. ಜೈವಿಕ ವೈವಿಧ್ಯತೆ, ತೋಟಗಾರಿಕಾ ವೈವಿಧ್ಯತೆ, ಇಂಧನ ಸುಸ್ಥಿರತೆ, ಜೈವಿಕ ಅನಿಲದೊಂದಿಗೆ ಸ್ಥಳೀಯ ಮಟ್ಟದಲ್ಲಿ ಉತ್ಪಾದನೆ ಮತ್ತು ಸೌರ ವಿದ್ಯುತ್ ಉತ್ಪಾದನೆಯ ಬಗ್ಗೆ ಸಂಕ್ಷಿಪ್ತ ಅವಲೋಕನ ನೀಡಿದರು. ಐಸಿಎಆರ್-ಸಿಪಿಸಿಆರ್ ಐ ನಿರ್ದೇಶಕ ಡಾ.ಕೆ.ಬಾಲಚಂದ್ರ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಾಗರ ಪರಿಸರ ತಜ್ಞ ಶ್ರೀಪ್ರಕಾಶ್ ಮೇಸ್ತ್ರಿ ಉಪಸ್ಥಿತರಿದ್ದರು. ಸಮಾರಂಭದ ಅಂಗವಾಗಿ ಮುಖ್ಯ ಕಚೇರಿ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಸಿಪಿಸಿಆರ್‍ಐ ವಿಜ್ಞಾನಿಗಳಾದ ಡಾ. ತಂಬಾನ್ ಸಿ., ಡಾ. ಸಂಸುದೀನ್ ಕೆ., ಡಾ. ಮುರಳೀಧರನ್ ಕೆ. ಶ್ರೀಮತಿ ತಂಬಾಯಿ ವಿ., ಶ್ರೀ ವೇಲಾಯುಧನ್ ಎಂ., ಶ್ರೀ ಲಕ್ಷ್ಮಣ್ ನಾಯಕ್, ಶ್ರೀ ಪಕ್ಕೇರನ್ ವಿ. ಎಸ್., ಸುಕುಮಾರನ್ ಕೆ ಮೊದಲಾದವರು ಉಪಸ್ಥಿತರಿದ್ದರು. ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಸಿಬ್ಬಂದಿ ನಿತ್ಯಹರಿದ್ವರ್ಣ ಮರದ ಸಸಿಗಳನ್ನು ನೆಟ್ಟರು.
ಐಸಿಎಆರ್-ಕೆವಿಕೆ, ಸಿಪಿಸಿಆರ್‍ಐ ವತಿಯಿಂದ ಮಹಿಳಾ ರೈತರಿಗೆ ಮತ್ತು ಕಾಸರಗೋಡಿನ ಕೇಂದ್ರೀಯ ವಿದ್ಯಾಲಯ ನಂ.1 ಶಿಕ್ಷಕರಿಗೆ ಹಣ್ಣಿನ ಮರದ ಸಸಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಪ್ರತೀಕ್ ಸೋಲಂಕಿ ಮತ್ತು ಐಸಿಎಆರ್-ಸಿಪಿಸಿಆರ್‍ಐ ನಡುವೆ 'ಕಲ್ಪ ಸಾವಯವ ಚಿನ್ನ-ತೆಂಗಿನ ಎಲೆ ವರ್ಮಿಕಾಂಪೆÇೀಸ್ಟಿಂಗ್' ಕುರಿತು ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಯಿತು. ಕಾರ್ಯಕ್ರಮದ ಅಂಗವಾಗಿ ಕೇಂದ್ರೀಯ ವಿದ್ಯಾಲಯ ನಂ.1, ಸಿಪಿಸಿಆರ್‍ಐ ಕಾಸರಗೋಡು ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆಯೂ ನಡೆಯಿತು. ಮುಖ್ಯ ಅತಿಥಿಗಳು ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು. ಡಾ.ಕೆ. ಪೆÇನ್ನುಸಾಮಿ ವಂದಿಸಿದರು.