ಕಾಸರಗೋಡು: ಪೆರಿಯ ಜೋಡಿ ಕೊಲೆ ಪ್ರಕರಣದ ಆರೋಪಿಯ ಪುತ್ರನ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ ನಾಲ್ವರು ಕಾಂಗ್ರೆಸ್ ಮುಖಂಡರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
ಕೆಪಿಸಿಸಿ ನೇಮಿಸಿದ್ದ ತನಿಖಾ ಆಯೋಗ ಭಾಗವಹಿಸಿದ ನಾಯಕರು ಲೋಪ ಎಸಗಿರುವುದನ್ನು ಪತ್ತೆ ಹಚ್ಚಿತ್ತು. ಕೆಪಿಸಿಸಿ ಸದಸ್ಯ ಬಾಲಕೃಷ್ಣನ್ ಪೆರಿಯ ಸೇರಿದಂತೆ ನಾಯಕರನ್ನು ಉಚ್ಚಾಟಿಸಲಾಯಿತು.
ಉದುಮ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಜನ್ ಪೆರಿಯ, ಪೆರಿಯ ಕ್ಷೇತ್ರದ ಅಧ್ಯಕ್ಷ ಪ್ರಮೋದ್ ಪೆರಿಯ, ಟಿ ರಾಮಕೃಷ್ಣನ್ ಅವರನ್ನು ಉಚ್ಚಾಟಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷರು ನಾಲ್ವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದ್ದಾರೆ ಎಂದು ಕೆಪಿಸಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಡ್ವ. ಪಿಎಂ ನಿಯಾಜ್ ಮತ್ತು ರಾಜಕೀಯ ವ್ಯವಹಾರಗಳ ಸಮಿತಿ ಸದಸ್ಯ ಎನ್ ಸುಬ್ರಮಣಿಯನ್ ಅವರನ್ನೊಳಗೊಂಡ ಕೆಪಿಸಿಸಿ ತನಿಖಾ ಆಯೋಗವು ಲೋಪದೋಷದ ವರದಿಯನ್ನು ಮುಖಂಡರಿಗೆ ನೀಡಿತ್ತು. ಇದನ್ನು ಪರಿಗಣಿಸಿ ಕ್ರಮ ಕೈಗೊಳ್ಳಲಾಗಿದೆ. ಯುವ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್‍ಲಾಲ್ ಹತ್ಯೆ ಪ್ರಕರಣದ 13ನೇ ಆರೋಪಿ ಎನ್.ಬಾಲಕೃಷ್ಣನ್ ಅವರ ಪುತ್ರನ ವಿವಾಹ ಔತಣಕೂಟದಲ್ಲಿ ಮುಖಂಡರು ಭಾಗವಹಿಸಿದ್ದರು.
ಈ ಚಿತ್ರಗಳು ಹೊರಬಿದ್ದ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಮುಖಂಡರು ಪ್ರತಿಭಟನೆಗೆ ಇಳಿದಿದ್ದರು. ಕೆಪಿಸಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಘಟನೆ ವಿವಾದವಾದ ಬಳಿಕ ಪ್ರಮೋದ್ ಪೆರಿಯ ಅವರನ್ನು ಕ್ಷೇತ್ರಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿತ್ತು.