ಅಮೃತಸರ: ಉತ್ತರ ಭಾರತದಲ್ಲಿ ಬಿಸಿಗಾಳಿ ಪ್ರಭಾವ ಮುಂದುವರಿದಿದೆ. ಸೆಕೆಗೆ ಜನರು ತತ್ತರಿಸಿದ್ದಾರೆ. ಈ ನಡುವೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಮ್) ಅಮೃತಸರದ ವಿದ್ಯಾರ್ಥಿಗಳು ಹಾಸ್ಟೆಲ್‌ಗೆ ಏರ್ ಕೂಲರ್ (ಎ.ಸಿ) ಅಳವಡಿಸುವಂತೆ ವಿನೂತನವಾಗಿ ಪ್ರತಿಭಟಿಸಿದ್ದಾರೆ.

ಕಾಲೇಜಿನ ಕ್ಯಾಂಟೀನ್ ಮತ್ತು ಗ್ರಂಥಾಲಯದಲ್ಲಿ ಕುಳಿತು ನಿದ್ರೆ ಮಾಡಿ ಮೌನವಾಗಿ ಪ್ರತಿಭಟಿಸಿದ್ದಾರೆ.ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಅಮೃತಸರದಲ್ಲಿ ಕಳೆದ ಕೆಲವು ದಿನಗಳಿಂದ ತಾಪಮಾನದ ತೀವ್ರತೆ ಹೆಚ್ಚಿದ್ದು ಗರಿಷ್ಠ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ತಲುಪಿದೆ.
ವಿಡಿಯೊದಲ್ಲಿ, ವಿದ್ಯಾರ್ಥಿಗಳು ಕುರ್ಚಿಯ ಮೇಲೆ ಕುಳಿತು ಟೇಬಲ್ ಮೇಲೆ ಮಲಗಿ ನಿದ್ರಿಸುವ ದೃಶ್ಯಗಳನ್ನು ಕಾಣಬಹುದು.
ಶುಭ್ ಎನ್ನುವ ಬಳಕೆದಾರರೊಬ್ಬರು ಎಕ್ಸ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ವಿಡಿಯೊಕ್ಕೆ 'ಐಐಎಂ ಅಮೃತಸರದ ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್‌ಗೆ ಎಸಿ ಅಳವಡಿಸುವಂತೆ ಆಡಳಿತ ಮಂಡಳಿ ವಿರುದ್ಧ ಎಸಿ ಇರುವ ಲೈಬ್ರರಿಯಲ್ಲಿ ಮಲಗಿ ಪ್ರತಿಭಟನೆ ನಡೆಸಿದರು. ಆಧುನಿಕ ಸಮಸ್ಯೆಗೆ ಆಧುನಿಕ ಪರಿಹಾರದ ಅಗತ್ಯವಿದೆ ಎಂದರು' ಎನ್ನುವುದಾಗಿ ಕ್ಯಾಪ್ಶನ್‌ನಲ್ಲಿ ಬರೆದುಕೊಂಡಿದ್ದಾರೆ.