ಭಾರತದಲ್ಲಿ ಮೊದಲ ಪಾರದರ್ಶಕ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದ ನಥಿಂಗ್ (Nothing) ಸ್ಮಾರ್ಟ್‌ಫೋನ್ ಬ್ರಾಂಡ್ ಈಗ ತನ್ನ ಸರಣಿಯನ್ನು ಮತ್ತಷ್ಟು ವಿಸ್ತರಿಸಿ ತನ್ನ ಮುಂಬರಲಿರುವ ಹೊಸ CMF Phone 1 ಸ್ಮಾರ್ಟ್‌ಫೋನ್ ಅನ್ನು ಅಧಿಕೃತವಾಗಿ ಶೀಘ್ರದಲ್ಲೇ ಬಿಡುಗಡೆಗೊಳಿಸಲು ಸಜ್ಜಾಗಿರುವುದಾಗಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇದರ ಮಾಹಿತಿಯನ್ನು ಅಧಿಕೃತವಾಗಿ ಪೋಸ್ಟ್ ಮಾಡಿದೆ. ಇದರ ಮತ್ತೊಂದು ವಿಶೇಷತೆ ಅಂದ್ರೆ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ತಿರುಗುವ ಡಯಲ್‌ನೊಂದಿಗೆ ಹೊಸ ಡಿಸೈನಿಂಗ್ ಲುಕ್ ಈಗಾಗಲೇ ಹಲವಾರು ಜನರನ್ನು ಆಕರ್ಷಿಸಿದ್ದು ಇದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ತಿಳಿದು ಇದರ ಬಗ್ಗೆ ಗೊತ್ತಿಲ್ಲದವರೊಂದಿಗೆ ಹಂಚಿಕೊಳ್ಳಿ.
CMF ಫೋನ್ 1 ಸ್ಮಾರ್ಟ್‌ಫೋನ್ ನಿರೀಕ್ಷಿತ ಬೆಲೆ ಮತ್ತು ಡಿಸೈನಿಂಗ್
ನಥಿಂಗ್ (Nothing) ಈಗಾಗಲೇ ಕಂಪನಿ ಈ ಮುಂಬರಲಿರುವ CMF Phone 1 ಸ್ಮಾರ್ಟ್‌ಫೋನ್ ಫ್ಲಿಪ್ಕಾರ್ಟ್ ಮೂಲಕ ಮಾರಾಟವಾಗುವುದನ್ನು ಖಚಿತಪಡಿಸಿದೆ. ಅಲ್ಲದೆ ಕಂಪನಿ ಇದರ ಬೆಲೆಯ ಬಗ್ಗೆ ಒಂದು ಬಿಟ್ ಅನ್ನು ನೀಡಿದ್ದು ಇಲ್ಲಿಯವರೆಗೆ ಕಂಪನಿ ಈ ಮುಂಬರಲಿರುವ CMF Phone 1 ಸ್ಮಾರ್ಟ್‌ಫೋನ್ ಅತ್ಯಂತ ಕೈಗೆಟುಕುವ ಹ್ಯಾಂಡ್‌ಸೆಟ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.
ಇದರರ್ಥ ಇದನ್ನು ನಾವು ಸುಮಾರು ರೂ. 20,000 ಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಅನ್ನು ನಿರೀಕ್ಷಿಸಬಹುದು. CMF Phone 1 ಸ್ಮಾರ್ಟ್‌ಫೋನ್ ಈವರೆಗೆ ನಾವು ನೋಡಿರುವ ಪಾರದರ್ಶಕ ಬ್ಯಾಕ್ ಪ್ಯಾನೆಲ್ (Transparent Back Panel) ಅನ್ನು ಹೊಂದಿರುವುದಿಲ್ಲ ಯಾಕೆಂದರೆ ಈಗಾಗಲೇ ಇದರ ಬಗ್ಗೆ ಟೀಸರ್ ಮೂಲಕ ಸುಳಿವು ನೀಡಲಾಗಿದೆ. ಆದರೆ ಭಾರತದಲ್ಲಿ ಯಾವಾಗ ಮತ್ತು ಯಾವ ಬೆಲೆಗೆ ಬಿಡುಗಡೆಯಾಗಲಿದೆ ಎನ್ನುವುದರ ಬಗ್ಗೆ ಪ್ರಸ್ತುತ ಯಾವುದೇ ಮಾಹಿತಿಗಳಿಲ್ಲ.
CMF Phone 1 ಸ್ಮಾರ್ಟ್‌ಫೋನ್ ನಿರೀಕ್ಷಿತ ಫೀಚರ್ ಮತ್ತು ವಿಶೇಷಣಗಳೇನು?
ಈ ಮುಂಬರಲಿರುವ ಈ ಸ್ಮಾರ್ಟ್ಫೋನ್ ನಿಮಗೆ ಈವೆರೆಗೆ ನೋಡಿರದ ಹೊಸ ಲುಕ್ ಮಾಡೆಲ್ ಡಿಸೈನಿಂಗ್‌ನೊಂದಿಗೆ ಬರಲಿದ್ದು CMF Phone 1 ಸ್ಮಾರ್ಟ್‌ಫೋನ್ ನಿರೀಕ್ಷಿತ ವಿಶೇಷಣಗಳು ಇತ್ತೀಚೆಗೆ ವೆಬ್‌ನಲ್ಲಿ ಕಾಣಿಸಿಕೊಂಡಿದ್ದು @realMlgmXyysd ಟಿಪ್‌ಸ್ಟರ್ ಪ್ರಕಾರ ಇದರ ಒಂದಿಷ್ಟು ಮಾಹಿತಿಗಳನ್ನು ಅವರು ವರದಿ ಮಾಡಿದ್ದಾರೆ ಈ ಮುಂಬರುವ CMF Phone 1 ಸ್ಮಾರ್ಟ್‌ಫೋನ್ 6.67 ಇಂಚಿನ OLED AMOLED ಡಿಸ್ಪ್ಲೇಯನ್ನು 120Hz ರಿಫ್ರೆಶ್ ದರದೊಂದಿಗೆ ಹೊಂದಿರುತ್ತದೆ.
ಇದು MediaTek Dimensity 7200 ಪ್ರೊಸೆಸರ್ ಅನ್ನು ಹೊಂಡುವ ನಿರೀಕ್ಷೆಗಳಿವೆ. ಈ ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾ ಸೆಟಪ್‌ನೊಂದಿಗೆ ಲಂಬವಾಗಿ ಜೋಡಿಸಲಾದ ಡ್ಯುಯಲ್-ರಿಯರ್ ಕ್ಯಾಮೆರಾಗಳನ್ನು ಹೊಂದಿರುವ ನಿರೀಕ್ಷೆಗಳಿವೆ. ಅಲ್ಲದೆ ಮುಂಭಾಗದಲ್ಲಿ 16MP ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಪಂಚ್ ಹೋಲ್ ಡಿಸ್ಪ್ಲೇಯಲ್ಲಿ ನೀಡಲಾಗಿದೆ. ಕೊನೆಯದಾಗಿ ಈ ಸ್ಮಾರ್ಟ್ಫೋನ್ ನಿಮಗೆ 5000mAh ಬ್ಯಾಟರಿ ಮತ್ತು 33W ಫಾಫ್ಸ್ಟ್ ಚಾರ್ಜಿಂಗ್ ಬೆಂಬಲವನ್ನು ಸಪೋರ್ಟ್ ಮಾಡಬಹುದು.
ಹ್ಯಾಂಡ್‌ಸೆಟ್ 8GB LPDDR4X RAM ಮತ್ತು 128GB / 256GB UFS 2.2 ಸ್ಟೋರೇಜ್ ಹೊಂದಿರುವ ನಿರೀಕ್ಷೆ. ಟಿಪ್‌ಸ್ಟರ್ ಪ್ರಕಾರ CMF Phone 1 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಧಾರಿತ NothingOS 2.6 ನೊಂದಿಗೆ ರವಾನೆಯಾಗುತ್ತದೆ. ಇದು ಕಪ್ಪು, ಹಸಿರು, ನೀಲಿ ಮತ್ತು ಕಿತ್ತಳೆ ಬಣ್ಣಗಳ ಮಿಶ್ರಣದ ಆಯ್ಕೆಗಳಲ್ಲಿ ಬರಬಹುದು. ಅಲ್ಲದೆ ಈ ಸ್ಮಾರ್ಟ್ಫೋನ್ ನಥಿಂಗ್ ಲಾಕ್ (Nothing Lock) ಕಾರ್ಯವಿಧಾನದೊಂದಿಗೆ ಬದಲಾಯಿಸಬಹುದಾದ ಪ್ಲಾಸ್ಟಿಕ್ ಬ್ಯಾಕ್ ಕವರ್‌ಗಳನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆ.