ಮುಂಬೈ: ಭಗವಾನ್ ಶ್ರೀರಾಮನನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ನಾಟಕವನ್ನು ಪ್ರದರ್ಶಿಸಲಾಗಿದೆ ಎಂಬ ದೂರಿನ ಮೇರೆಗೆ 'ರಾಹೋವಣ' ನಾಟಕದಲ್ಲಿ ಭಾಗವಹಿಸಿದ್ದ 8 ವಿದ್ಯಾರ್ಥಿಗಳಿಗೆ ₹1.2 ಲಕ್ಷ ದಂಡ ವಿಧಿಸಿ ಬಾಂಬೆ ಐಐಟಿ ನೋಟಿಸ್ ನೀಡಿದೆ.
ಮುಂಬೈ: ಭಗವಾನ್ ಶ್ರೀರಾಮನನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ನಾಟಕವನ್ನು ಪ್ರದರ್ಶಿಸಲಾಗಿದೆ ಎಂಬ ದೂರಿನ ಮೇರೆಗೆ 'ರಾಹೋವಣ' ನಾಟಕದಲ್ಲಿ ಭಾಗವಹಿಸಿದ್ದ 8 ವಿದ್ಯಾರ್ಥಿಗಳಿಗೆ ₹1.2 ಲಕ್ಷ ದಂಡ ವಿಧಿಸಿ ಬಾಂಬೆ ಐಐಟಿ ನೋಟಿಸ್ ನೀಡಿದೆ.
ಮಾರ್ಚ್ 31ರಂದು ನಡೆದ 'ಕಲಾ ಉತ್ಸವ' ಕಾರ್ಯಕ್ರಮದ ವೇಳೆ 'ರಾಹೋವಣ' ಎಂಬ ಹೆಸರಿನ ನಾಟಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದ್ದರು.
' ನಾಟಕದಲ್ಲಿ ಭಗವಾನ್ ರಾಮನನ್ನು ಅಪಹಾಸ್ಯ ಮಾಡಿದ್ದಲ್ಲದೇ ರಾಮಾಯಣವನ್ನು ಅಸಭ್ಯವಾಗಿ ಮತ್ತು ಅವಹೇಳನಕಾರಿಯಾಗಿ ಚಿತ್ರಿಸಲಾಗಿತ್ತು' ಎಂದು ನಾಟಕದ ವಿರುದ್ಧ ಆಡಳಿತ ಮಂಡಳಿಗೆ ದೂರು ನೀಡಿದ್ದ ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿ ಹೇಳಿದ್ದಾರೆ.
ದೂರಿನ ಮೇರೆಗೆ ಎಂಟು ವಿದ್ಯಾರ್ಥಿಗಳಿಗೆ ₹1,20,000 ದಂಡ(ತಲಾ ₹40 ಸಾವಿರ ದಂಡ) ವಿಧಿಸಿ ಜೂನ್ 4ರಂದು ಬಾಂಬೆ ಐಐಟಿ ನೋಟಿಸ್ ಹೊರಡಿಸಿತ್ತು. ದಂಡವನ್ನು ಜುಲೈ 30ರೊಳಗೆ ಪಾವತಿಸುವಂತೆಯೂ ಸೂಚಿಸಿದೆ.
ನಾಟಕದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ವಿದ್ಯಾರ್ಥಿಗಳ ಗುಂಪೊಂದು ಕಾಲೇಜು ಆಡಳಿತ ಮಂಡಳಿಗೆ ಏಪ್ರಿಲ್ 8ರಂದು ದೂರು ಸಲ್ಲಿಸಿದ್ದರು. ಅಲ್ಲದೇ ನಾಟಕವನ್ನು 'ಹಿಂದೂಪೋಬಿಯಾ' ಎಂದು ಕರೆದಿದ್ದರು.