HEALTH TIPS

Lok Sabha Election 2024: ''ಈಗಲೂ ಹೇಳ್ತೇನೆ ಕೇಳಿ, ಬಿಜೆಪಿಯೇ ಗೆಲ್ಲೋದು''; Exit Polls ಗೂ ಮೊದಲು Prashant Kishor ಭವಿಷ್ಯ!

           ನವದೆಹಲಿ: ಹಾಲಿ ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಮುಕ್ತಾಯದ ಹಂತಕ್ಕೆ ಬಂದಿದ್ದು, Exit Poll ವರದಿ ಪ್ರಸಾರಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಖ್ಯಾತ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ತಮ್ಮದೇ ಆದ ಲೆಕ್ಕಾಚಾರ ನೀಡಿದ್ದಾರೆ.

           ಹಾಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ (BJP) ನೇತೃತ್ವದ ಎನ್‌ಡಿಎ (NDA) ಗೆಲುವು ಖಚಿತ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದು, ಮತ್ತೊಮ್ಮೆ ಬಿಜೆಪಿ 303 ಸ್ಥಾನಗಳನ್ನು ಗೆಲ್ಲಬಹುದು ಎಂದು ಅವರು ಭವಿಷ್ಯ ನುಡಿದಿದ್ದಾರೆ.

            ಕಳೆದ ಬಾರಿಯ ಚುನಾವಣೆಗಿಂತ ಈ ಬಾರಿ ಬಿಜೆಪಿ ಮತ್ತು ಅದರ ಎನ್ ಡಿಎ ಮೈತ್ರಿಕೂಟ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದು, ಪಶ್ಚಿಮ ಮತ್ತು ಉತ್ತರ ಭಾರತದಲ್ಲಿ ಸ್ಥಾನಗಳ ಸಂಖ್ಯೆಯಲ್ಲಿ ಗಮನಾರ್ಹ ಬದಲಾವಣೆ ಆಗದು ಎಂದು ಹೇಳಿದ್ದಾರೆ.

          “ನನ್ನ ಅಂದಾಜಿನ ಪ್ರಕಾರ, ಬಿಜೆಪಿ ಹಿಂದಿನ ಚುನಾವಣೆಗಿಂತ ಸ್ವಲ್ಪ ಹೆಚ್ಚಿನ ಸಂಖ್ಯೆಗಳೊಂದಿಗೆ ಅಧಿಕಾರಕ್ಕೆ ಹಿಂತಿರುಗಲಿದೆ. ಆದರೆ ಭಾರತದ ಪೂರ್ವ ಮತ್ತು ದಕ್ಷಿಣ ಪ್ರದೇಶಗಳಿಂದ ಪಕ್ಷವು ಸಾಕಷ್ಟು ಬೆಂಬಲ ಗಳಿಸಲಿದೆ. ತೆಲಂಗಾಣ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡುಗಳಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ಹೆಚ್ಚಿಸಿಕೊಂಡಿದೆ. ಪೂರ್ವ ಮತ್ತು ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಜೆಪಿಯ ಸ್ಥಾನಗಳ ಸಂಖ್ಯೆ ಮತ್ತು ಮತ ಹಂಚಿಕೆಯಲ್ಲಿ ಸಂಭಾವ್ಯ ಏರಿಕೆ ಕಾಣಬಹುದು ಎಂದು ಹೇಳಿದ್ದಾರೆ.

         ಅಂತೆಯೇ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಬಗ್ಗೆ ಯಾವುದೇ ಗಮನಾರ್ಹ ಅತೃಪ್ತಿ ಇಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ಪರ್ಯಾಯಕ್ಕಾಗಿ ಬಲವಾದ ಬೇಡಿಕೆ ಇಲ್ಲ. ಕೇಸರಿ ಪಕ್ಷದ ಸ್ಥಾನಗಳ ಸಂಖ್ಯೆ 2019ರ ಲೆಕ್ಕಾಚಾರಕ್ಕೆ (303) ಹತ್ತಿರವಾಗಬಹುದು ಅಥವಾ ಅದನ್ನೂ ಮೀರಬಹುದು. ನಾವು ಕೆಲವು ಮೂಲಭೂತ ಅಂಶಗಳನ್ನು ನೋಡಬೇಕು.

            ಅಧಿಕಾರದಲ್ಲಿರುವ ಸರ್ಕಾರ ಮತ್ತು ಅದರ ನಾಯಕನ ವಿರುದ್ಧ ಕೋಪವಿದ್ದರೆ, ಪರ್ಯಾಯವಿದೆಯೇ ಎಂಬುದನ್ನು ಲೆಕ್ಕಿಸದೆ, ಜನರು ಅವರ ವಿರುದ್ಧ ಮತ ಹಾಕುವ ಸಾಧ್ಯತೆಯಿದೆ. ಆದರೆ ಇಲ್ಲಿಯವರೆಗೆ ಅಂಥ ಅಲೆಯನ್ನು ನಾವು ಕಂಡಿಲ್ಲ. ಮೋದಿಜಿ ವಿರುದ್ಧ ವ್ಯಾಪಕವಾದ ನಿರಾಶೆ, ಈಡೇರದ ಆಕಾಂಕ್ಷೆಗಳು ಇರಬಹುದು, ಆದರೆ ವ್ಯಾಪಕವಾದ ಕೋಪವನ್ನು ನಾವು ಕೇಳಿಲ್ಲ ಎಂದು ಹೇಳಿದ್ದಾರೆ.

           ಶನಿವಾರದ ಮತದಾನದೊಂದಿಗೆ, ಏಪ್ರಿಲ್ 19ರಂದು ಪ್ರಾರಂಭವಾದ ಮ್ಯಾರಥಾನ್ ಸರಣಿ ಮತದಾನದ ಪ್ರಕ್ರಿಯೆ ಮುಕ್ತಾವಾಗುತ್ತಿದೆ. ಸಾರ್ವತ್ರಿಕ ಚುನಾವಣೆಯ ಮೊದಲ ಆರು ಹಂತಗಳಲ್ಲಿ ಕ್ರಮವಾಗಿ ಶೇ.66.14, ಶೇ.66.71, ಶೇ.65.68, ಶೇ.69.16, ಶೇ.62.2, ಮತ್ತು ಶೇ.63.36ರಷ್ಟು ಮತದಾನವಾಗಿದೆ.

            ಲೋಕಸಭಾ ಚುನಾವಣೆಯೊಂದಿಗೇ ವಿವಿಧ ರಾಜ್ಯಗಳ ವಿಧಾನಸಭೆಗಳಿಗೂ ಅಂದರೆ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಮತದಾನ ನಡೆದಿದೆ. ಆಂಧ್ರ ಪ್ರದೇಶದಲ್ಲಿ ಜೂನ್ 4ರಂದು ಮತ ಎಣಿಕೆ ನಡೆಯಲಿದ್ದು, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಜೂನ್ 2ರಂದು ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದೆ.

            ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ, ದೂರದರ್ಶನ ಚಾನೆಲ್‌ಗಳು ಮತ್ತು ಸುದ್ದಿವಾಹಿನಿಗಳು ಸಂಜೆ 6.30ರ ನಂತರ ಎಕ್ಸಿಟ್ ಪೋಲ್ ಡೇಟಾವನ್ನು ಮತ್ತು ಅದರ ಫಲಿತಾಂಶಗಳನ್ನು ಪ್ರಕಟಿಸಲಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries