ದುಮ್ಕಾ : ಕಲ್ಲಿದ್ದಲು ಸಂಗ್ರಹ ಘಟಕ ನಿರ್ಮಾಣವನ್ನು ವಿರೋಧಿಸಿ ದುಮ್ಕಾ ಜಿಲ್ಲೆಯ ಹಳ್ಳಿಯೊಂದರಲ್ಲಿ 400ಕ್ಕೂ ಹೆಚ್ಚು ಜನರು ಇಂದು (ಶನಿವಾರ) ನಡೆದ ಲೋಕಸಭೆ ಚುನಾವಣೆಯ ಏಳನೇ ಮತ್ತು ಅಂತಿಮ ಹಂತದ ಮತದಾನವನ್ನು ಬಹಿಷ್ಕರಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದುಮ್ಕಾ ಲೋಕಸಭಾ ಕ್ಷೇತ್ರದ ಭಾಗವಾದ ಬಾಗ್ದುಭಿ ಗ್ರಾಮದ ಮತಗಟ್ಟೆ ಸಂಖ್ಯೆ 94 ರಲ್ಲಿ ಒಟ್ಟು 426 ಮತದಾರರು ತಮ್ಮ ಹಕ್ಕು ಚಲಾಯಿಸಿಲ್ಲ ಎಂದು ಅವರು ಹೇಳಿದ್ದಾರೆ.
ಮತಗಟ್ಟೆಯಲ್ಲಿ ದಾಖಲಾಗಿರುವ 430 ಮತದಾರರ ಪೈಕಿ ಕೇವಲ ನಾಲ್ವರು ಮತದಾರರು ಮಾತ್ರ ಮಧ್ಯಾಹ್ನ 3 ಗಂಟೆಯವರೆಗೆ ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಉಪವಿಭಾಗಾಧಿಕಾರಿ ಅಧಿಕಾರಿ ಅಮರ್ ಕುಮಾರ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ರೈಲ್ವೆಯ ಕಲ್ಲಿದ್ದಲು ಸಂಗ್ರಹ ಘಟಕ ನಿರ್ಮಾಣ ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಮಸ್ಯೆ ಕುರಿತು ಮೇಲಧಿಕಾರಿಗಳಿಗೆ ತಿಳಿಸುವುದಾಗಿ ಸಭೆ ನಡೆಸಿ ಭರವಸೆ ನೀಡಿದರು ಗ್ರಾಮಸ್ಥರು ಮತದಾನ ಮಾಡಲು ಒಪ್ಪಲಿಲ್ಲ ಎಂದು ಅವರು ಹೇಳಿದ್ದಾರೆ.